ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಹೊಸದಾಗಿ ನಾಲ್ಕು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಪಿ-194 ರ ಸಂಪರ್ಕಕ್ಕೆ ಬಂದಿರುವ 4 ಜನರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಸೋಂಕಿತರೆಲ್ಲರೂ ಹುಬ್ಬಳ್ಳಿಯ ಮುಲ್ಲಾ ಓಣಿಯ ನಿವಾಸಿ ಪಿ-194 ರ ಅಣ್ಣ ಮತ್ತು ಅಣ್ಣನ ಮಕ್ಕಳಾಗಿದ್ದಾರೆ. ಪಿ-233( 05 ವರ್ಷದ ಗಂಡು ಮಗು) , ಪಿ-234 (3.6 ವರ್ಷದ ಗಂಡು ಮಗು) , ಪಿ-235( 07 ವರ್ಷದ ಹೆಣ್ಣುಮಗು) ಹಾಗೂ ಪಿ-236 (37 ವರ್ಷದ ಪುರುಷ ) ಎಂದು ಗುರುತಿಸಲಾಗಿದೆ. ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಈ ಪ್ರದೇಶವನ್ನು ಕಂಟೇನ್ ಮೆಂಟ್ ಎಂದು ಘೋಷಿಸಿ ಆಗಮನ, ನಿರ್ಗಮನ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.