ಹಣವನ್ನು ರಸ್ತೆಯಲ್ಲಿ ಎಸೆದ ಯುವಕ, ಹೆಕ್ಕಲು ಮುಗಿಬಿದ್ದರಲ್ಲಿ ಶುರುವಾಯ್ತು ಕೊರೊನಾ ಭಯ

ಸೋಮವಾರ, 13 ಏಪ್ರಿಲ್ 2020 (17:12 IST)
ಒಂದೆಡೆ ಲಾಕ್ ಡೌನ್ ಸಮಸ್ಯೆಯಿಂದ ಜನತೆ ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರೆ, ಅಚಾನಕ್ ಆಗಿ ಕರೆನ್ಸಿ ನೋಟುಗಳು ರಸ್ತೆಯಲ್ಲಿ ಸಿಕ್ಕರೆ ಹೇಗಾಗಬೇಡ.

ಬೆಳ್ಳಂಬೆಳಿಗ್ಗೆ ಉಡುಪಿ ಕೃಷ್ಣಮಠದ ಸಮೀಪದ ವಾದಿರಾಜ ರಸ್ತೆಯಲ್ಲಿ ಯುವಕನಬ್ಬ  2000, 500, 200 ರೂಪಾಯಿಯ ನೋಟುಗಳನ್ನು ಎಸೆಯುತ್ತಾ ಹೋಗಿದ್ದಾನೆ. ಇದನ್ನು ಕಂಡ ಜನತೆ ಅವುಗಳನ್ನು ಹೆಕ್ಕಲು ಮುಗಿಬಿದ್ದು ಹೋಗಿದ್ದಾರೆ. ಯುವಕನ ಬಗ್ಗೆ ಸಂಶಯಗೊಂಡ ಸ್ಥಳೀಯರು ಯುವಕನನ್ನು ಪ್ರಶ್ನಿಸಲು ಹಿಂಬಾಲಿಸಿದಾಗ ಯುವಕ ಕೂಡಲೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನೋಟು ಹೆಕ್ಕಿಕೊಂಡ ಜನತೆಯ ಖುಷಿ ಮಾತ್ರ ಕೇವಲ ಕೆಲವೇ ನಿಮಿಷಕ್ಕೆ ಸೀಮಿತವಾಗಿತ್ತು. ಏಕೆಂದರೆ ಯುವಕ ಎಸೆದ ನೋಟುಗಳೆಲ್ಲಾ ನಕಲಿಯಾಗಿದ್ದವು.

ನೋಟುಗಳು ನಕಲಿ ಎಂದು ತಿಳಿದು ಬಂದ ಬಳಿಕ ಜನರು ಆ ನೋಟುಗಳನ್ನು ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಉಡುಪಿ ನಗರ ಠಾಣೆಯ ಪೊಲೀಸರು ಯುವಕನ ಪತ್ತೆಗಾಗಿ ಬಲೆ ಬೀಸಿದ್ದಾರೆ.  

ಈ ನಡುವೆ ನೋಟಿನ ಮೂಲಕ ಕೊರೊನಾ ವೈರಸ್ ಹಬ್ಬಿಸುತ್ತಾರೆಂಬ ವದಂತಿ ದಟ್ಟವಾಗಿ ಹರಡಿದ್ದು ಇದರಿಂದ ನಾಗರಿಕರು ಬೆಚ್ಚಿಬಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ