ಕೆಪಿಸಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 7 ರಂದು ನಡೆಯಲಿದ್ದು ಈ ಸಮಾರಂಭಕ್ಕೆ 4 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಸಮಾರಂಭ ನಡೆಯಲಿದ್ದು, 8 ಸಾವಿರ ಟಿವಿಗಳಲ್ಲಿ 4 ಲಕ್ಷ ಜನರು ವೀಕ್ಷಿಸಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯದಂತೆ ಈ ಸಮಾರಂಭವನ್ನು ಅದ್ದೂರಿಯಾಗಿ ಮಾಡುವ ಚಿಂತನೆ ಇತ್ತು.
ಕೊರೊನಾ ಸಂಕಷ್ಟ ಸಮಯದಲ್ಲಿ ಅಂತಹ ಸಮಾರಂಭ ಮಾಡಿದರೆ, ವಿರೋಧಿಗಳ ಬಾಯಿ ತುತ್ತಾಬೇಕಾಗುತ್ತದೆ ಎಂಬ ಕಾರಣದಿಂದ ಹಿರಿಯ ನಾಯಕ ಸಲಹೆ ಮೇರೆ 200 ಜನರು ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರಾಜ್ಯದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿಯಾಗಲಿ ಎಂಬ ಉದ್ದೇಶದಿಂದ 8 ಸಾವಿರ ಭಾಗಗಳಲ್ಲಿ 8 ಸಾವಿರ ಟಿವಿ ಪರದೇ ಮೇಲೆ ಕಾರ್ಯಕ್ರಮ ನೋಡುವಂತಾಗಲು ಕ್ರಮ ಕೈಗೊಂಡಿದ್ದ ಎಲ್ಲರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ 50 ಜನರ ಮಿತಿಯಲ್ಲಿ ಸಮಾರಂಭ ವಿಕ್ಷಣೆ ಮಾಡಬೇಕು. ಈ ರೀತಿ ಮಾಡಿದರೆ ಸುಮಾರು 4 ಲಕ್ಷ ಜನರು ಟಿವಿ ಪರದೆಯ ಮೇಲೆ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾದಂತೆ ಆಗುತ್ತದೆ ಎಂದಿದ್ದಾರೆ.