ಮೀಸಲಾತಿ ಪ್ರಮಾಣ ಹೆಚ್ಚಿಸಿ : ಸರಕಾರಕ್ಕೆ ಜಾರಕಿಹೊಳಿ ವಾರ್ನಿಂಗ್

ಶುಕ್ರವಾರ, 10 ಜನವರಿ 2020 (19:18 IST)
ಮೀಸಲಾತಿ ಪ್ರಮಾಣ ಹೆಚ್ಚಿಸಲೇಬೇಕು. ಹೀಗಂತ ಜಾರಕಿಹೊಳಿ ಖಡಕ್ಕಾಗಿ ಹೇಳಿದ್ದಾರೆ.


ಹೊಸ ಜಾತಿ ಸೇರ್ಪಡೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ಯಾವುದೇ ಹೊಸ ಜಾತಿ ಸೇರ್ಪಡೆ ಮಾಡಿದರೆ ಅದೇ ಪ್ರಮಾಣದ ಮೀಸಲಾತಿ ಪ್ರಮಾಣ ಹೆಚ್ಚಳವಾಗಬೇಕು. ಹೀಗಂತ ಶಾಸಕ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ರು.

ಬೇರೆ ಬೇರೆ ಜಾತಿಗಳನ್ನು ಸೇರ್ಪಡೆಗೊಳಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ, ಈಗಾಗಲೇ ಪಟ್ಟಿಯಲ್ಲಿರುವ ಜಾತಿ ಸಮುದಾಯಗಳಿಗೆ ಅನ್ಯಾಯವಾಗುತ್ತದೆ.

ರಾಜಕೀಯ ಕಾರಣಗಳಿಗೆ ಬೇರೆ ಬೇರೆ ಜಾತಿಗಳನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಪರಿಶಿಷ್ಟರು ಬರೀ ಮೀಸಲಾತಿ ಪ್ರಮಾಣ ಹೆಚ್ಚಳ ಹೋರಾಟದಲ್ಲೇ ಕಾಲ ಕಳೆಯುವಂತಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ