ಕಾಂಗ್ರೆಸ್ ನ ನಾಲ್ವರ ಶಾಸಕರು ಚಲಾಯಿಸಿದ್ದ 4 ಮತಗಳು ಅಸಿಂಧುಗೊಂಡಿದೆ- ಶೋಭಾ ಕರಂದ್ಲಾಜೆ

ಶನಿವಾರ, 24 ಮಾರ್ಚ್ 2018 (06:51 IST)
ಬೆಂಗಳೂರು : ಶುಕ್ರವಾರ ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಲ್ವರು ಶಾಸಕರು ಚಲಾಯಿಸಿದ ಮತಗಳು ಅಸಿಂಧುಗೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


‘ಕಾಂಗ್ರೆಸ್ ನ ನಾಲ್ವರ ಶಾಸಕರು ಚಲಾಯಿಸಿದ್ದ 4 ಮತಗಳು ಅಸಿಂಧುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕಾದ ಸಂಗತಿ. ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ ಶಾಸಕರಿಗೆ ನಂಬಿಕೆಯಿಲ್ಲ. ಯಾಕೆ 4 ಮತ ಇನ್ ವ್ಯಾಲಿಡ್ ಎಂಬುದನ್ನು ತಿಳಿಸಬೇಕು’ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದ್ದಾರೆ.


ನಿನ್ನೆ ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಇಂಟು ಮಾರ್ಕ್, ರೈಟ್ ಮಾರ್ಕ್ ಹಾಕಿದ್ದರಿಂದ ಬಾಬೂರಾವ್ ಚಿಂಚನಸೂರ್, ಕಾಗೋಡು ತಿಮ್ಮಪ್ಪ ಮತಗಳನ್ನು ಹಾಗೂ ಜೆಡಿಎಸ್'ನ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ ಹಾಗೂ ಹೆಚ್.ಸಿ. ಬಾಲಕೃಷ್ಣ ಮತಗಳನ್ನು  ಅಸಿಂಧುಗೊಳ್ಳಿಸಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ