ಗೃಹ ಪ್ರವೇಶದ ಊಟ ಸೇವಿಸಿ 40 ಮಂದಿ ಅಸ್ವಸ್ಥ

ಸೋಮವಾರ, 11 ನವೆಂಬರ್ 2019 (11:14 IST)
ಹಾಸನ : ಗೃಹ ಪ್ರವೇಶದ ಊಟ ಸೇವಿಸಿ 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ಭಾನುವಾರದಂದು ಹಾಸನ ಜಿಲ್ಲೆಯ ಗುಡ್ಡೇನಹಳ್ಳಿಯಲ್ಲಿ ನಡೆದಿದೆ.




ನಿನ್ನೆ ದೇವರಾಜ್ ಎಂಬುವವರ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ 40 ಮಂದಿಗೆ ಊಟ ಮಾಡಿದ ಬಳಿಕ ವಾಂತಿ ,ಭೇದಿ ಶುರುವಾಗಿ ಅಸ್ವಸ್ಥರಾಗಿದ್ದಾರೆ.


ತಕ್ಷಣ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಲುಷಿತ ಆಹಾರ ಸೇವಿಸಿ ಅವರಿಗೆ ಹೀಗಾಯ್ತಾ? ಅಥವಾ ಆಹಾರದಲ್ಲಿ ಯಾರಾದರೂ ಏನಾದರೂ ಕಲಬೆರಕೆ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ