ಡೈವೋರ್ಸ್ ಪಡೆಯಲು ಬಂದ ಮಹಿಳೆಗೆ ವಕೀಲ ಮಾಡಿದ್ದೇನು ಗೊತ್ತಾ?
ಸೋಮವಾರ, 11 ನವೆಂಬರ್ 2019 (10:52 IST)
ಹಾಸನ : ಡೈವೋರ್ಸ್ ಪಡೆಯಲು ಬಂದ ಮಹಿಳೆಯ ಜೊತೆ ವಕೀಲ ಅಸಭ್ಯವಾಗಿ ವರ್ತಿಸಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.
ಮಹಿಳೆಗೆ ಪತಿಯ ಜೊತೆ ಕಲಹವಿದ್ದ ಹಿನ್ನಲೆಯಲ್ಲಿ ಆತನಿಂದ ಡೈವೋರ್ಸ್ ಕೊಡಿಸುವಂತೆ ವಕೀಲನ ಬಳಿ ಬಂದಿದ್ದಾಳೆ. ಆದರೆ ಆಕೆಗೆ ಡೈವೋರ್ಸ್ ಕೊಡಿಸುವುದಾಗಿ ಹೇಳಿದ ವಕೀಲ ಆಕೆಯ ಮುಂದೆ ಬೆತ್ತಲಾಗಿ ನಿಂತು ತನ್ನ ಜೊತೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ. ಅಲ್ಲದೇ ಪದೇ ಪದೇ ಫೋನ್, ಮೇಸೆಜ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಇದರಿಂದ ನೊಂದ ಮಹಿಳೆ ಸಕಲೆಶಪುರ ಠಾಣೆಯಲ್ಲಿ ವಕೀಲನ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.