16ರ ವಿದ್ಯಾರ್ಥಿ ಜತೆ ಓಡಿ ಹೋದ 40ರ ಶಿಕ್ಷಕಿ

ಬುಧವಾರ, 1 ಮಾರ್ಚ್ 2017 (11:04 IST)
40 ವರ್ಷದ ಶಿಕ್ಷಕಿಯೋರ್ವಳು 16 ವರ್ಷದ ತನ್ನ ವಿದ್ಯಾರ್ಥಿಯ ಜತೆ ಪರಾರಿಯಾದ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಈ ಘಟನೆ ನಡೆದಿದ್ದು ಮಗನನ್ನು ಹುಡುಕಿ ಹುಡುಕಿ ಪೋಷಕರು ಹತಾಶರಾಗಿದ್ದಾರೆ.
ಇದ್ದ ಒಬ್ಬ ಮಗ ತಮ್ಮಿಂದ ದೂರವಾದ ಚಿಂತೆಯಲ್ಲಿ ಕೊರಗುತ್ತಿರುವ ಕಲಬುರಗಿ ನಗರದ ಶೇಕ್ ರೋಜಾ ಬಡಾವಣೆ ನಿವಾಸಿಗಳಾದ ಅತಿಕ್ ಹಾಗೂ ಭಾನು ಬೇಗಂ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ ಅವರ ಮಗ 2 ವರ್ಷದ ಹಿಂದೆ ತನ್ನ ಶಿಕ್ಷಕಿ ಬಿಲ್ಕಿಸ್ ಪ್ರೀತಿಯ ಬಲೆಗೆ ಬಿದ್ದಿದ್ದ. ಈ ವಿಷಯ ತನ್ನ ಪೋಷಕರಿಗೆ ತಿಳಿಯುತ್ತಿದ್ದಂತೆ ಶಿಕ್ಷಕಿ ಜತೆ ಪರಾರಿಯಾಗಿದ್ದಾನೆ.
 
ಈ ಕುರಿತು ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮತ್ತೀಗ ಅವರು ಮಕ್ಕಳ ಸಹಾಯವಾಣಿ ನೆರವು ಪಡೆದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಪತಿಯಿಂದ ದೂರವಾಗಿರುವ ಬಿಲ್ಕಿಸ್‌ಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
 

ವೆಬ್ದುನಿಯಾವನ್ನು ಓದಿ