India Pakistan: ಕದನ ವಿರಾಮ ಮಾತುಕತೆ: ಅಮೆರಿಕಾಗೆ ಮಣಿಯುತ್ತಾ ಭಾರತ
ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ನಡೆದ ಎರಡೇ ದಿನಗಳಲ್ಲಿ ಅಮೆರಿಕಾ ಎರಡೂ ದೇಶಗಳ ಮನವೊಲಿಸಿ ಅಲ್ಪ ಕಾಲದ ಕದನ ವಿರಾಮ ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ಹಾಗಿದ್ದರೂ ಪಾಕಿಸ್ತಾನ ಕೆಲವೇ ಗಂಟೆಗಳಲ್ಲಿ ಅದನ್ನು ಉಲ್ಲಂಘಿಸಿತ್ತು. ಹೀಗಾಗಿ ಭಾರತ ಕೂಡಾ ಪಾಕಿಸ್ತಾನವನ್ನು ನಂಬುವ ಸ್ಥಿತಿಯಲ್ಲಿಲ್ಲ.
ಇಂದು ಎರಡೂ ದೇಶಗಳ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ. ಈ ಮಾತುಕತೆಯಲ್ಲಿ ಭಾರತ ತನ್ನ ಬೇಡಿಕೆಯನ್ನು ಪಾಕಿಸ್ತಾನದ ಮುಂದಿಡಲಿದೆ. ಇದಕ್ಕೆ ಒಪ್ಪದೇ ಹೋದಲ್ಲಿ ಭಾರತ ಕದನ ವಿರಾಮದಿಂದ ಹಿಂದೆ ಸರಿಯಬಹುದು.
ಈ ನಡುವೆ ಭಾರತ ಯಾವುದೇ ಕಾರಣಕ್ಕೂ ಅಮೆರಿಕಾ ಒತ್ತಡಕ್ಕೆ ಮಣಿಯಬಾರದು. ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಸಾರ್ವಜನಿಕವಾಗಿ ಒತ್ತಡ ಕೇಳಿಬರುತ್ತಿದೆ.