BRAHMOS: ಬ್ರಹ್ಮೋಸ್ ಕ್ಷಿಪಣಿ ತಾಕತ್ತು ಏನೆಂದು ಪಾಕಿಸ್ತಾನದ ಬಳಿ ಕೇಳಿ: ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದಲ್ಲಿ ಇಂದು ಬ್ರಹ್ಮೋಸ್ ಕ್ಷಿಪಣಿ ಘಟಕ ಲೋಕಾರ್ಪಣೆ ವೇಳೆ ಅವರು ಮಾತನಾಡಿದ್ದಾರೆ. ಆಪರೇಷನ್ ಸಿಂಧೂರ್ ನಲ್ಲಿ ಬ್ರಹ್ಮೋಸ್ ಕ್ಷಿಪಣಿ ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ ಇದರ ತಾಕತ್ತು ಏನೆಂಬುದು ಪಾಕಿಸ್ತಾನಕ್ಕೆ ಅರಿವಾಗಿದೆ ಎಂದಿದ್ದಾರೆ.
ಈ ಮೂಲಕ ಆಪರೇಷನ್ ಸಿಂಧೂರ್ ನಲ್ಲಿ ಬ್ರಹ್ಮೋಸ್ ಕ್ಷಿಪಣಿ ಬಳಕೆ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಉಗ್ರವಾದ ಎನ್ನುವುದು ನಾಯಿಬಾಲದಂತೆ. ಅದನ್ನು ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಿಲ್ಲ. ಅದಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ಕಾರ್ಖಾನೆಯಿಂದ ವರ್ಷಕ್ಕೆ 80-100 ಕ್ಷಿಪಣಿಗಳನ್ನು ತಯಾರು ಮಾಡುವ ಗುರಿ ಹೊಂದಲಾಗಿದೆ.