ಚಂಡಮಾರುತಕ್ಕೆ 47 ಮಂದಿ ಸಾವು
ದಕ್ಷಿಣ ಫಿಲಿಪೈನ್ಸ್ ಪ್ರಾಂತ್ಯದಲ್ಲಿ ಧಾರಾಕಾರ ಮಳೆಯಾಗಿದೆ. ಭಾರಿ ಪ್ರವಾಹ ಮತ್ತು ಭೂಕುಸಿತದಲ್ಲಿ 47 ಜನರು ಮೃತಪಟ್ಟಿದ್ದಾರೆ. ಜೊತೆಗೆ 60 ಗ್ರಾಮಸ್ಥರು ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ. ಕೆಲವರು ಮಳೆನೀರು, ಮಣ್ಣು, ಕಲ್ಲುಗಳು ಮತ್ತು ಮರಗಳ ಕೆಳಗೆ ಹೂತು ಹೋಗಿರುವುದು ವರದಿಯಾಗಿದೆ. ಭಗ್ನಾವಶೇಷಗಳಲ್ಲಿ ಹಲವಾರು ಜನ ಸಿಲುಕಿದ್ದಾರೆ. ಈ ಚಂಡಮಾರುತ ಪರಿಣಾಮ ಎಷ್ಟು ಗಂಭೀರವಾಗಿತ್ತು ಅಂದರೆ ಫಿಲಿಪೈನ್ಸ್‌ನ ಬುಡಕಟ್ಟು ಹಳ್ಳಿಯಾದ ಕುಸಿಯಾಂಗ್‌ನಲ್ಲಿ 60 ಕ್ಕೂ ಹೆಚ್ಚು ಜನರೊಂದಿಗೆ ಹಲವಾರು ಮನೆಗಳು ಹೂತುಹೋಗಿವೆ. ಕುಸಿಯಾಂಗ್‌ನಲ್ಲಿ ರಕ್ಷಕರು ಸ್ಪೇಡ್‌ಗಳನ್ನು ಬಳಸಿ ಹನ್ನೊಂದು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪೂರ್ವ ಪ್ರಾಂತ್ಯದ ಕ್ಯಾಮರಿನ್ಸ್ ಸುರ್‌ಗೆ ಅಪ್ಪಳಿಸಿದ ಚಂಡಮಾರುತದಿಂದ ಅಪಾರ ಹಾನಿಯಾಗಿದೆ. ಭಾರೀ ಉಪಕರಣಗಳು ಮತ್ತು ಸೈನ್ಯ, ಪೊಲೀಸ್ ಮತ್ತು ಸ್ವಯಂಸೇವಕರು ಸೇರಿದಂತೆ ಹೆಚ್ಚಿನ ರಕ್ಷಣಾ ಕಾರ್ಯಕರ್ತರನ್ನು ಶೋಧ ಮತ್ತು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಲು ನಿಯೋಜಿಸಲಾಗಿದೆ.