ಬಂಗಳೂರಿನ 50ರಷ್ಟು ಜನರಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಅಸಮಾಧಾನ -ಬಹಿರಂಗ ಪಡಿಸಿದ್ದ ವರದಿ

ಗುರುವಾರ, 22 ಸೆಪ್ಟಂಬರ್ 2022 (14:32 IST)
ಮೂಲಭೂತ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅಸಮಾಧಾನವನ್ನು ಹೊಂದಿದ್ದರೆ, ರಾಜರಾಜೇಶ್ವರಿನಗರದ ನಿವಾಸಿಗಳು ಹೆಚ್ಚು ಸಂತೃಪ್ತರಾಗಿದ್ದಾರೆ ಎಂದು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪಿಎಸಿ) ಬುಧವಾರ ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ.
ಬೆಂಗಳೂರು ನಾಗರಿಕ ಗ್ರಹಿಕೆ ಸಮೀಕ್ಷೆ' ಎಂಬ ಶೀರ್ಷಿಕೆಯ ವರದಿಯು ನಾಗರಿಕ ಸೇವೆಗಳಿಗೆ ಸಂಬಂಧಿಸಿದಂತೆ ನಾಗರಿಕರ ಆದ್ಯತೆಗಳು ಮತ್ತು ಬೆಂಗಳೂರು ನಗರದಲ್ಲಿ ಸೇವೆಗಳ ಗುಣಮಟ್ಟದ ಬಗ್ಗೆ ಅವರ ಅನುಭವವನ್ನು ಸಮೀಕ್ಷೆ ಮಾಡಿದೆ. ಶೇ 57ರಷ್ಟು ಜನರು ನಗರದ ಒಟ್ಟಾರೆ ಆಡಳಿತವು ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಗಮನಸೆಳೆದಿದೆ.
 
ಈ ಸಮೀಕ್ಷೆಯು 8,405 ನಾಗರಿಕರನ್ನು ಒಳಗೊಂಡಿದ್ದು, ಅವರ ತಿಳುವಳಿಕೆ ಮತ್ತು ಭಾಗವಹಿಸುವಿಕೆ, ಆಡಳಿತದ ಗುಣಮಟ್ಟ ಮತ್ತು ನಾಗರಿಕ ಸೌಲಭ್ಯಗಳ ಬಗ್ಗೆ ತೃಪ್ತಿ ಮತ್ತು ಬಿಬಿಎಂಪಿ ಚುನಾವಣೆಗಳ ಬಗ್ಗೆ ಕೇಳಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ