ವಸಂತ ಮಾಸದಲ್ಲಿ ಹಣ್ಣುಗಳ ರಾಜ ಎನಿಸಿದಂತಹ ಮಾವಿನ ಹಣ್ಣಿನ ಸವಿಯನ್ನು ಸವಿಬೇಕು ಎಂದುಕೊಂಡವರಿಗೆ ಖುಷಿ ಸುದ್ದಿ.
ವಿನೂತವಾಗಿ ರುಚಿಯಾದ ಮಾವಿನ ಹಣ್ಣನ್ನು ಮನೆ ಮನೆಗಳಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂವಿ.ವೇಂಕಟೇಶ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಹಾಪ್ ಕಾಮ್ಸ್ ನವರು ರೈತರ ತೋಟದಲ್ಲಿ ಬೆಳೆದ ಸಾವಯವ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ. ಆನ್‍ಲೈನ್‍ನಲ್ಲಿ ಬುಕ್ ಮಾಡುವವರಿಗೆ ಒಂದೇ ದಿನದಲ್ಲಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ವಿನೂತನವಾದ ಮತ್ತು ವಿಶೇಷವಾದ ಪ್ರಯತ್ನ ಇದಾಗಿದ್ದು, ನಿಮಗೆ ಬೇಕಾದ ವಿವಿಧ ಬಗೆಯ ಬಾದಾಮಿ, ತೋತಾಪುರಿ ಮತ್ತು ಸಿಂಧೂರ ಮಾವಿನ ಹಣ್ಣು ಬೇಕಾದಲ್ಲಿ ಕನಿಷ್ಟ 5 ಕೆ.ಜಿ ಬುಕ್ ಮಾಡಬಹುದು. ಈ ಎಲ್ಲಾ ಪ್ರಕ್ರಿಯೆಗೆ ಕಾವೇರಿ ಗೋಲ್ಡ್ ಎಂದು ಹೆಸರಿಡಲಾಗಿದ್ದು, ಕೇವಲ ಮಂಡ್ಯ ಸಿಟಿಗೆ ಮಾತ್ರ ಸೀಮಿತವಾಗಿದೆ ಎಂದಿದ್ದಾರೆ.