ಸಾವಿರಾರು ಅತಂತ್ರ ವಲಸಿಗರ ಕೈಹಿಡಿದ ಬಿಜೆಪಿ ಸಂಸದ

ಮಂಗಳವಾರ, 12 ಮೇ 2020 (19:23 IST)
ಒಂದು ಸಾವಿರಕ್ಕೂ ಹೆಚ್ಚು ವಲಸಿಗರು ಅತಂತ್ರರಾಗಿದ್ದ ವೇಳೆ ಬಿಜೆಪಿ ಸಂಸದರೊಬ್ಬರು ಅವರ ನೆರವಿಗೆ ಧಾವಿಸಿದ್ದಾರೆ.

ಮುಂಬೈನ ಥಾಣೆಯಿಂದ ಕಲಬುರಗಿಗೆ ಹೊರಟ "ಶ್ರಮಿಕ್" ವಿಶೇಷ ರೈಲು ಭರ್ತಿಯಾಗಿದ್ದರಿಂದ ಇನ್ನೂ ಒಂದು ಸಾವಿರಕ್ಕೂ ಹೆಚ್ಚು ವಲಸಿಗರು ಅತಂತ್ರರಾಗಿದ್ದರು. ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್, ಬಸ್ ಗಳ ವ್ಯವಸ್ಥೆ ಮಾಡಿ ಈ ವಲಸಿಗರನ್ನು ಅವರವರ ಊರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಜಾಧವ್ ಅವರು ನೀಡಿದ ಮಾಹಿತಿ ಮೇರೆಗೆ 1,230 ಮಂದಿ ಥಾಣೆಗೆ ಬಂದು ರೈಲು ಏರಿದರು. ಆದರೆ ರೈಲು ಭರ್ತಿಯಾಗಿ ಸೀಟು ಸಿಗದೆ ಅತಂತ್ರರಾದ ಜನರು ಜಾಧವ್ ಅವರಿಗೆ ಫೋನಾಯಿಸಿದರು.

ಕೂಡಲೇ ಸ್ಪಂದಿಸಿದ ಸಂಸದರು,  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಆರ್ ಸಿ)ಯ ಬಸ್ ಗಳು ಸೇರಿ 10 ವಾಹನಗಳ ವ್ಯವಸ್ಥೆ ಮಾಡಿದರು.

ಇದರಿಂದಾಗಿ ಸಾವಿರಾರು ವಲಸಿಗರು ತಮ್ಮ ಊರು ಸೇರುವಂತಾಯಿತು ಎಂದು ಸಂಸದರು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ