ನ್ಯೂಯಾರ್ಕ್ ಹಿಮಪಾತಕ್ಕೆ 60 ಮಂದಿ ಬಲಿ

ಬುಧವಾರ, 28 ಡಿಸೆಂಬರ್ 2022 (16:27 IST)
ಅಮೆರಿಕದಲ್ಲಿ ಹಿಮ ಸುನಾಮಿ ಬೀಭತ್ಸ ಸನ್ನಿವೇಶ ಸೃಷ್ಟಿಸಿದೆ. ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 50 ಡಿಗ್ರಿವರೆಗೂ ತಾಪಮಾನ ಕುಸಿದಿದೆ. ನಿನ್ನೆಯಷ್ಟೇ 38 ಇದ್ದ ಸಾವಿನ ಪ್ರಮಾಣ ಇಂದು ಏಕಾಏಕಿ 60ರ ಗಡಿ ದಾಟಿದೆ. ನ್ಯೂಯಾರ್ಕ್ ಸಿಟಿ ಒಂದರಲ್ಲೇ 27 ಮಂದಿ ಸೇರಿದಂತೆ ದೇಶಾದ್ಯಂತ ಸುಮಾರು 60 ಮಂದಿ ಮೃತಪಟ್ಟಿದ್ದಾರೆ. ಅತಿಯಾದ ಹಿಮದಿಂದಾಗಿ ಕಾರು, ಬಸ್, ಅಂಬುಲೆನ್ಸ್ ಹಾಗೂ ಟ್ರಕ್‌ಗಳು ಹಿಮದಲ್ಲಿ ಹೂತು ಹೋಗಿವೆ. ಇದರಿಂದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ ಸಾಧ್ಯವಾಗಿದೆ. ಪಶ್ಚಿಮ ನ್ಯೂಯಾರ್ಕ್​​​​ನಲ್ಲಿ ಸುಮಾರು 9 ಇಂಚು (23 ಸೆಂ.ಮೀ.) ಪ್ರಮಾಣದಲ್ಲಿ ಹಿಮ ಬೀಳುತ್ತಿದೆ. ಅಮೆರಿಕ-ಕೆನಡಾ ಮಧ್ಯೆ ಆರ್ಕಟಿಕ್ ಬ್ಲಾಸ್ಟ್ ಹೋಗಿ ಬಾಂಬ್ ಸೈಕ್ಲೋನ್ ಆಗಿದೆ. ಅಮೆರಿಕ-ಕೆನಡಾ ನಡುವೆ ಹಿಮರಾಶಿ ಹರಡುತ್ತಲೇ ಇದೆ. ಟೆಕ್ಸಾಸ್‌ನಿಂದ ಕ್ಯೂಬೆಕ್‌ವರೆಗೆ ಸುಮಾರು 3,200 ಕಿ.ಮೀ.ವರೆಗೆ ಹಿಮ ಆವರಿಸಿದೆ. ನ್ಯೂಯಾರ್ಕ್, ಬಫೆಲೋ ಮಿಚಿಗನ್, ಒರ್ಲಾಂಡೋ, ಡೆನ್ವರ್, ದಲ್ಲಾಸ್, ನಾಶ್‌ವಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಹೆದ್ದಾರಿಗಳಲ್ಲಿ ದಾರಿ ಕಾಣದೆ ಸರಣಿ ಅಪಘಾತಗಳಾಗಿವೆ. ಎಲ್ಲೆಂದರಲ್ಲೇ ಜನ, ವಾಹನಗಳು ಫ್ರೀಜ್ ಆಗುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವ ಕಾರಣ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ