ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ
ರಾಜ್ಯ ಪೊಲೀಸ್ ಇಲಾಖೆಯ ಸಬ್ ಡಿವಿಷನ್ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಂಚಾರ, ಕಾನೂನು ಸುವ್ಯವಸ್ಥೆ ಕಾಪಾಡಲು ಠಾಣೆಗಳ ಸಬ್ ಡಿವಿಷನ್ಗಳನ್ನು ಹೆಚ್ಚಳ ಮಾಡಲಾಗಿದೆ. ಪೊಲೀಸ್ ಮಹಾ ನಿರ್ದೇಶಕರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಸಬ್ ಡಿವಿಷನ್ನಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಪಶ್ಚಿಮ ಸಂಚಾರ ಸಬ್ ಡಿವಿಷನ್ ಮಾರ್ಪಡಿಸಿ ಆದೇಶ ನೀಡಿದೆ. ಪಶ್ಚಿಮ ಸಂಚಾರ ಉಪವಿಭಾಗದ ಜತೆಗೆ ವಿಜಯನಗರ ಉಪವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್ ಡಿವಿಷನ್ ಕೂಡ ವಿಂಗಡಣೆ ಮಾಡಲಾಗಿದೆ. ಆಗ್ನೇಯ ಸಬ್ ಡಿವಿಷನ್ ಜತೆಗೆ ಆಡುಗೋಡಿ ಸಬ್ ಡಿವಿಷನ್ ರಚಿಸಲಾಗಿದೆ. ಹೊಸದಾಗಿ ಹೆಚ್ಎಸ್ಆರ್ ಲೇಔಟ್ ಸಬ್ ಡಿವಿಷನ್ ಸೇರ್ಪಡೆ ಮಾಡಲಾಗಿದೆ. ಉತ್ತರ ವಿಭಾಗದ ಯಶವಂತಪುರ ಸಬ್ ಡಿವಿಷನ್ ವಿಂಗಡಿಸಿ ಯಶವಂತಪುರ, ಪೀಣ್ಯ ಸಬ್ ಡಿವಿಷನ್ಗಳಾಗಿ ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.