ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆಗೆ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಸ್ಟಾರ್ ಹೋಟೆಲ್, ರೆಸ್ಟೋರೆಂಟ್ನ ಕೊಠಡಿಗಳಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಮುಂಗಡ ಬುಕ್ಕಿಂಗ್ ಜೋರಾಗಿದ್ದು, ಎಂದಿಗಿಂತ ಶೇ.30 ದರ ಏರಿಕೆಯಾಗಿದೆ. ಕಳೆದೆರಡು ವರ್ಷ ಕೋವಿಡ್ನಿಂದ ಬಣಗುಟ್ಟಿದ್ದ ಹೋಟೆಲ್, ರೆಸ್ಟೋರೆಂಟ್ಗಳೆಲ್ಲ ಈ ಬಾರಿ ಆಲ್ ರಿಸವ್ರ್ಡ ಬೋರ್ಡ್ ತಗಲಿಸುವ ಹಂತಕ್ಕೆ ಬಂದಿವೆ. ಡಿ.30ರಿಂದ ಜ.2ರವರೆಗಿನ ಮುಂಗಡ ಬುಕ್ಕಿಂಗ್ ಬಹುತೇಕ ಭರ್ತಿಯಾಗಿದೆ. ಇನ್ನು ಕೆಲವು ಬುಕ್ಕಿಂಗ್ ಆಗಿದ್ದ ರೂಮ್ ಗಳು ಕ್ಯಾನ್ಸಲ್ ಆಗುತ್ತಿವೆ ಎಂದು ಹೋಟೆಲ್ ಸಂಘಟನೆ ತಿಳಿಸಿದೆ.