ಬೆಂಗಳೂರಿನಲ್ಲಿ 6000 ಅನಧಿಕೃತ ಬಡಾವಣೆ: ಜಿಲ್ಲಾಧಿಕಾರಿ ಮಂಜುನಾಥ್

ಸೋಮವಾರ, 26 ಜುಲೈ 2021 (20:15 IST)
ಬೆಂಗಳೂರು ನಗರದಲ್ಲಿ 6 ಸಾವಿರದ ಎಪ್ಪತ್ತೇಳು ಬಡಾವಣೆಗಳನ್ನು ಅನಧಿಕೃತ ವೆಂದು ಘೋಷಿಸಿ ವೆಬ್ ಸೈಟ್ ನಲ್ಲಿ ಹಾಕಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂ
ಜುನಾಥ್ ತಿಳಿಸಿದ್ದಾರೆ.
ಇಂದು‌ ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಎರಡು ವರುಷದ ಸರ್ಕಾರದ ಸಾಧನೆಗಳ‌ ಕೈಪಿಡಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಒಂದು ಲಕ್ಷ ಮನೆಗಳ‌ ಯೋಜನೆಗೆ ಒಂದು ಸಾವಿರದ ನೂರು ಎಕರೆ ಜಮೀನನನ್ನು ರಾಜೀವ್ ಗಾಂದಿ‌ವಸತಿ ನಿಗಮಕ್ಕೆ ಮಂಜೂರು ಮಾಡಲಾಗಿದೆ ಎಂದರು.
837 ಕೆರೆಗಳನ್ನು ಗುರುತಿಸಿ. ಪ್ರತಿವಾರ ಐದು ತಾಲ್ಲೂಕುಗಳಲ್ಲಿ ಕೆರೆ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. ಕರೊನಾದ ಮೂರನೇ ಅಲೆ ಎದುರಿಸಲು ನಗರ ಜಿಲ್ಲೆ ಸಜ್ಜಾಗಿದೆ.ಮಕ್ಕಳ ಹಾರೈಕೆ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಅನಿತಾ ಲಕ್ಷ್ಮಿ. ವಾರ್ತಾಧಿಕಾರಿ ಪಲ್ಲವಿ‌ಹೊನ್ನಾಪುರ ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ