ಮಹಾರಾಷ್ಟ್ರದಲ್ಲಿ ಸತತ ಮಳೆ ಹಿನ್ನೆಲೆ, ರಾಜಾಪೂರ್ ಡ್ಯಾಂನಿಂದ ಕೃಷ್ಣಾ ನದಿಗೆ 7 ಸಾವಿರ ಕ್ಯೂಸೆಕ್ ನೀರನ್ನ ಬಿಡುಗಡೆ ಮಾಡಲಾಗಿದೆ. ರಾಜಾಪೂರ ಡ್ಯಾಂನಿಂದ ಕೃಷ್ಣಾ ನದಿಗೆ 7,120 ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ನೀರು ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ ತಲುಪಿದೆ. ನೀರಿಲ್ಲದೇ ಬರಿದಾಗಿದ್ದ ಕೃಷ್ಣೆಗೆ ಜೀವ ಕಳೆ ಬಂದಿದೆ.. ಕಳೆದ 3 ವರ್ಷಗಳಲ್ಲಿ ಕೃಷ್ಣಾ ನದಿ ತುಂಬಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದವು.. ಈ ಬಾರಿ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ