ಮಳೆಯಿಂದಾಗಿ 2 ತಿಂಗಳಿಗೆ 70 ಸಾವು..!
ಭಾರೀ ಮಳೆಯಿಂದ ಅಪಾರ ಹಾನಿಯಾಗಿದ್ದು, ವರುಣಾರ್ಭಟಕ್ಕೆ ಜೀವಹಾನಿ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಜೂನ್ 1ರಿಂದ ಆಗಸ್ಟ್ 6ರವರೆಗೆ 70 ಮಂದಿ ಸಾವಾಗಿದ್ದು, 507 ಜಾನುವಾರು ಮೃತಪಟ್ಟಿವೆ. ಮಳೆಯಿಂದ ರಾಜ್ಯಾದ್ಯಂತ 3559 ಮನೆಗಳು ನೆಲಕಚ್ಚಿದ್ದು17,212 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1,29,087 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಹಾನಿಯಾಗಿದೆ. 7,942 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ