ಸಿಸಿಬಿ ಪೊಲೀಸರ ಕಾರ್ಯಾಚರಣೆ

geetha

ಮಂಗಳವಾರ, 13 ಫೆಬ್ರವರಿ 2024 (16:00 IST)
ಬೆಂಗಳೂರು- ನಗರದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಚಾಮರಾಜಪೇಟೆ, ಮಹಾದೇವಪುರ, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ದಾಳಿ ನಡೆಸಿದ್ದು,ದಾಳಿ ವೇಳೆ ಒಂದು ಕೋಟಿ 45 ಲಕ್ಷ ಮೌಲ್ಯದ ನಿಷೇಧಿತ ನಿಕೋಟಿನ್ ಉತ್ಪನ್ನ ವಶಕ್ಕೆ ಪಡೆಯಲಾಗಿದೆ.ನಿಷೇಧಿತ ಹುಕ್ಕಾ ನಿಕೋಟಿನ್ ಉತ್ಪನ್ನಗಳನ್ನ ಅನಧಿಕೃತವಾಗಿ ಶೇಖರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದ ಒಂಭತ್ತು ಮಂದಿಯನ್ನ ಸಿಸಿಬಿ ಮಹಿಳಾ ಸಂರಕ್ಷಣದಳದ ಪೊಲೀಸರು ಬಂಧಿಸಿದ್ದಾರೆ.ದಾಳಿ ವೇಳೆ 1 ಕೋಟಿ ೪೫ ಲಕ್ಷ ಮೌಲ್ಯದ ನಿಕೋಟಿನ್ ಉತ್ಪನ್ನ, 1.10 ಲಕ್ಷ ನಗದು, 11 ಮೊಬೈಲ್ 1 ಟಾಟಾ ಏಸ್ ವಾಹನ ವಶಕ್ಕೆ ಪಡೆದಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ