ಇಂದಿನಿಂದ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ಇಲ್ಲಿದೆ ವಿವರ

Krishnaveni K

ಶುಕ್ರವಾರ, 20 ಡಿಸೆಂಬರ್ 2024 (08:47 IST)
Photo Credit: X
ಮಂಡ್ಯ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಂದ ಕಬ್ಬಿನ ನಾಡು ಮಂಡ್ಯದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಉಳಿದ ವಿವರಗಳು ಇಲ್ಲಿವೆ.
 

ಇಂದು ಬೆಳಿಗ್ಗೆ 10.20 ಕ್ಕೆ ಮುಖ್ಯಮಮತ್ರಿ ಸಿದ್ದರಾಮಯ್ಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಲಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಕನ್ನಡ ಹಬ್ಬವಾಗಿರಲಿದೆ. ಡಿಸೆಂಬರ್ 22 ಕ್ಕೆ ಸಮ್ಮೇಳನಕ್ಕೆ ತೆರೆ ಬೀಳುವುದು.

ಒಟ್ಟು ಮೂರು ವೇದಿಕೆಗಳಲ್ಲಿ 27 ವಿಚಾರಗೋಷ್ಠಿಗಳು ನಡೆಯಲಿದೆ. 150 ವಿದ್ವಾಂಸರು, ನಾಢಿಗೆ ಸಂಬಂಧಿಸಿದ ವಿವಿಧ ವಿಚಾರಗಳ, ಸಮಸ್ಯೆಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ ಬಗ್ಗೆಯೂ ಅವಲೋಕನ ನಡೆಯಲಿದೆ.

ಇನ್ನು, ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಡ್ಯ ಜಿಲ್ಲೆಯ ನಿವಾಸಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ ನಾಲಿಗೆ ರುಚಿ ಹೆಚ್ಚಿಸುವ ಊಟ, ತಿಂಡಿ, ಮನತಣಿಸುವ ಸಾಂಸ್ಕೃತಿ ಕಾರ್ಯಕ್ರಮಗಳು, ಪುಸ್ತಕ ಮೇಳ ಸೇರಿದಂತೆ ಕನ್ನಡದ ಹಬ್ಬ ಕಳೆಗಟ್ಟಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ