ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ನಾನ್ ವೆಜ್ ಊಟದ ಜಟಾಪಟಿ ನಿಲ್ಲುತ್ತಿಲ್ಲ

Krishnaveni K

ಗುರುವಾರ, 12 ಡಿಸೆಂಬರ್ 2024 (10:57 IST)
ಮಂಡ್ಯ: ಕಬ್ಬಿನ ನಾಡು ಮಂಡ್ಯದಲ್ಲಿ ನಡೆಯಲಿರುವ 87 ನೇ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವಿಚಾರವಾಗಿ ಜಟಾಪಟಿ ಇನ್ನೂ ನಿಂತಿಲ್ಲ. ಇದೀಗ ಸಮ್ಮೇಳನದ ಅಧ್ಯಕ್ಷ ಗೊ.ರು. ಚೆನ್ನಬಸಪ್ಪ ಹೇಳಿಕೆ ನೀಡಿದ್ದಾರೆ.

87 ನೇ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ಮಾಂಸಾಹಾರ ಊಟ ಆಯೋಜಿಸುವ ವಿಚಾರವಾಗಿ ಪರ-ವಿರೋಧ ಚರ್ಚೆಯಾಗುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಯಾಕೆ ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಆಹಾರದ ವಿಚಾರದಲ್ಲಿ ಚರ್ಚೆ ಯಾಕೆ ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ ರು ಚೆನ್ನಬಸಪ್ಪ ಆಹಾರದ ವಿಚಾರದಲ್ಲಿ ಯಾವುದೇ ವಿವಾದ ಬೇಡ. ಯಾವ ರೀತಿ ಆಹಾರ ನೀಡಬೇಕು ಎಂಬುದನ್ನು ಆಹಾರ ಸಮಿತಿ ನಿರ್ಧರಿಸುತ್ತದೆ. ಅವರೇ ವ್ಯವಸ್ಥೆ ಮಾಡುವುದು. ಹೀಗಾಗಿ ಅದರಲ್ಲಿ ವಿವಾದ ಬೇಡ. ಇದು ಸಾಂಸ್ಕೃತಿ ಹಬ್ಬ ಎಂದು ಗೊ ರು ಚೆನ್ನಬಸಪ್ಪ ಹೇಳಿದ್ದಾರೆ.

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ, ಮದ್ಯ, ಧೂಮಪಾನ ನಿಷೇಧ ಹೇರಲಾಗಿದೆ. ಆದರೆ ಆಹಾರ ನಮ್ಮ ಹಕ್ಕು, ಆಹಾರ ಸಮಾನತೆ ಇರಬೇಕು. ಈ ಕಾರಣಕ್ಕೆ ಮಾಂಸಾಹಾರಕ್ಕೆ ಅವಕಾಶ ನೀಡಬೇಕು ಎಂದು ಕೆಲವರು ಅಭಿಯಾನವನ್ನೇ ಮಾಡುತ್ತಿದ್ದಾರೆ. ಬೇಳೆಯ ಜೊತೆ ಮೂಳೆಯೂ ಇರಲಿ ಎಂದು ಕೆಲವರು ವಾದ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ