ಪ್ರಿಯಕರ ಸಿಗಲಿಲ್ಲವೆಂಬ ಬೇಸರಕ್ಕೆ ವಿವಾಹಿತೆ ಆತ್ಮಹತ್ಯೆ, ಪ್ರಿಯಕರನೂ ನೇಣಿಗೆ ಶರಣು

Krishnaveni K

ಬುಧವಾರ, 18 ಡಿಸೆಂಬರ್ 2024 (09:47 IST)
ಮಂಡ್ಯ: ಪ್ರಿಯಕರ ಸಿಗಲಿಲ್ಲವೆಂಬ ಕಾರಣಕ್ಕೆ ವಿವಾಹಿತ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿನ ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.

20 ವರ್ಷದ ಸೃಷ್ಟಿ ಎಂಬ ವಿವಾಹಿತ ಮಹಿಳೆ ಮತ್ತು ಪ್ರಿಯಕರ 25 ವರ್ಷದ ಪ್ರಸನ್ನ ಜೀವ ಕಳೆದುಕೊಂಡವರು. ಇಬ್ಬರೂ ಈ ಮೊದಲಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯವರು ಸೃಷ್ಟಿಯನ್ನು ದಿನೇಶ್ ಎಂಬವರ ಜೊತೆ ಒಂದು ವರ್ಷದ ಹಿಂದಷ್ಟೇ ಮದುವೆ ಮಾಡಿಸಿದ್ದರು. ಇತ್ತ ಪ್ರಸನ್ನ ಕೂಡಾ ಸೃಷ್ಟಿಯ ಸ್ನೇಹಿತೆ ಸ್ಪಂದನಾ ಜೊತೆ ಮದುವೆಯಾಗಿದ್ದ.

ಮದುವೆ ಬಳಿಕವೂ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಸೃಷ್ಟಿ ಮತ್ತು ಪತಿ ದಿನೇಶ್ ನಡುವೆ ಆಗಾಗ ಜಗಳವಾಗುತ್ತಿತ್ತು. ಡಿಸೆಂಬರ್ 11 ರಂದು ಸೃಷ್ಟಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ದಿನೇಶ್ ಪೊಲೀಸರಿಗೂ ದೂರು ನೀಡಿದ್ದ. ಡಿಸೆಂಬರ್ 16 ರಂದು ಸೃಷ್ಟಿ ಮೃತದೇಹ ಶಿಂಸಾ ನದಿಯಲ್ಲಿ ಕಂಡುಬಂದಿತ್ತು.

ಸೃಷ್ಟಿ ಆತ್ಮಹತ್ಯೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಪ್ರಸನ್ನ ಜೊತೆಗಿನ ಲವ್ ಅಫೇರ್ ಗೊತ್ತಾಗಿತ್ತು. ಹೀಗಾಗಿ ಆತನನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಪ್ರೇಯಸಿಯ ಆತ್ಮಹತ್ಯೆಯಿಂದ ಆಘಾತಗೊಂಡಿದ್ದ ಆತನೂ ನೇಣಿಗೆ ಶರಣಾಗಿದ್ದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ