ಕಳಪೆ ಗುಣಮಟ್ಟದ 9 ಇಂಜೆಕ್ಷನ್ ಗಳು ಬ್ಯಾನ್: ಯಾವೆಲ್ಲಾ ಇಂಜೆಕ್ಷನ್ ಇಲ್ಲಿದೆ ವಿವರ
ಅಸುರಕ್ಷಿತ ಮತ್ತು ಗುಣಮಟ್ಟ ಪರಿಶೀಲಿಸಲು ಈ ಇಂಜೆಕ್ಷನ್ ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ನಿರೀಕ್ಷಿತ ಗುಣಮಟ್ಟ ಹೊಂದಿಲ್ಲ ಎಂಬ ಕಾರಣಕ್ಕೆ ಈ ಇಂಜೆಕ್ಷನ್ ಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಸಾಮಾನ್ಯ ಜ್ವರಕ್ಕೆ ನೀಡಲಾಗುವ ಇಂಜೆಕ್ಷನ್ ಕೂಡಾ ಸೇರಿದೆ.
ಈ ಔಷಧಿಗಳನ್ನು ಉತ್ಪಾದಿಸುವ ಕಂಪನಿಗಳಲ್ಲಿ ಔಷಧಿ ಉತ್ಪಾದನಾ ಪದ್ಧತಿಯ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಬೇಕು ಮತ್ತು ಅಲ್ಲಿಯವರೆಗೆ ಈ ಕಂಪನಿಗಳ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ ನೀಡಿದ್ದಾರೆ.