ಮೂತ್ರ ಮಾಡಿದ್ದಕ್ಕೆ 3 ವರ್ಷದ ಮಗುವಿನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆಯಾ ಮತ್ತು ಶಿಕ್ಷಕಿ

ಮಂಗಳವಾರ, 26 ನವೆಂಬರ್ 2019 (10:52 IST)
ಚಿಕ್ಕಮಗಳೂರು : ಮೂತ್ರ ಮಾಡಿದ್ದಕ್ಕೆ 3 ವರ್ಷದ ಮಗುವಿನ ಮೇಲೆ ಅಂಗನವಾಡಿ ಶಿಕ್ಷಕಿ ಹಾಗೂ ಆಯಾ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ ಗ್ರಾಮದಲ್ಲಿ ನಡೆದಿದೆ.



ಶಿಕ್ಷಕಿ ಮಾಲ ಹಾಗೂ ಆಯಾ ಮಂಜುಳಾ ಮಗುವಿನ ಮೇಲೆ ಹಲ್ಲೆ ಮಾಡಿದ ಪಾಪಿಗಳು. ಅಂಗನವಾಡಿಯಲ್ಲಿ ಮಗು ಚಡ್ಡಿಯಲ್ಲಿ ಮೂತ್ರ ಮಾಡಿದೆ. ಇದರಿಂದ ಕೋಪಗೊಂಡ ಆಯ ಹಾಗೂ ಶಿಕ್ಷಕಿ ಮಗುವಿನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಇದರ ಪರಿಣಾಮ ಮಗುವಿನ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಘಟನೆಗೆ ಸಂಬಂಧಿಸಿದಂತೆ ಆಯಾ ಮತ್ತು ಶಿಕ್ಷಕಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ  ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ