40 ವರ್ಷದ ವಿವಾಹಿತೆಯೊಂದಿಗೆ 30 ವರ್ಷದ ವಿವಾಹಿತ ಪರಾರಿ

geetha

ಶನಿವಾರ, 20 ಜನವರಿ 2024 (16:41 IST)
ಬೆಂಗಳೂರು : ವಸೀಂ ಮತ್ತು ಸುಮೈಯಾಬಾನು 7 ವರ್ಷದ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ 2 ವರ್ಷದ ಹೆಣ್ಣುಮಗುವೊಂದೂ ಇದೆ.  ಕೆಲ ದಿನಗಳಿಂದ ವಸೀಂ ದಿಲ್ಷಾದ್‌ ಜೊತೆಗೆ ಸಂಬಂಧ ಶುರುವಿಟ್ಟುಕೊಂಡಿದ್ದ. ಈ ಸುಳಿವು ತಿಳಿದ ಸುಮೈಯಾ ಬಾನು ಅವರಿಬ್ಬರೂ ಹೋಟೆಲ್‌ ರೂಂ ಒಂದರಲ್ಲಿ ಏಕಾಂತವಾಗಿ ಕಾಲ ಕಳೆಯುತ್ತಿರುವ ವೇಳೆ ಕುಟುಂಬಸ್ಥರೊಡನೆ ದಾಳಿ ನಡೆಸಿದ್ದಳು. ಈ ಸಮಯದಲ್ಲಿ ಇಬ್ಬರೂ ಮಹಿಳೆಯರ ನಡುವೆ ಭಯಂಕರ ಕಾಳಗವೂ ನಡೆದಿತ್ತು. ಪುಟ್ಟೇನಹಳ್ಳಿ ಪೊಲೀಸರು ಠಾಣೆಗೆ ಕರೆಸಿ ಇಬ್ಬರಿಗೂ ಛೀಮಾರಿ ಹಾಕಿ ಕಳಿಸಿದ್ದರು. 

ವಿವಾಹಿತ ಮಹಿಳೆ ಹಾಗೂ ವಿವಾಹಿತ ಪುರುಷ ಪರಸ್ಪರ ಅನೈತಿಕ ಸಂಬಂಧ ಬೆಳೆಸಿ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಸೀಂ (30)ಮತ್ತು ದಿಲ್‌ ಷಾದ್‌ (40) ಪರಾರಿಯಾಗಿರುವ ಜೋಡಿಯಾಗಿತ್ತು, ವಸೀಂ ಪತ್ನಿ ಸುಮೈಯಾ ಬಾನು ಹಾಗೂ ದಿಲ್‌ ಷಾದ್‌ ಗಂಡ ನಯೀಂ ತಮಗೆ ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. 

ಆದರೆ ಈಗ ವಸೀಂ ಹಾಗೂ ದಿಲ್ಷಾದ ಮನೆಯಿಂದ ಪರಾರಿಯಾಗಿದ್ದಾರೆ. ಮತ್ತೊಂದೆಡೆ ದಿಲ್ಷಾದ್‌ ಗಂಡನೂ ಸಹ ದೂರು ದಾಖಲಿಸಿದ್ದು, ಮನೆಯಿಂದ 70 ಲಕ್ಷ ರೂ. ಹಣ ಮತ್ತು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ತನ್ನ ಹೆಂಡತಿ ಓಡಿಹೋಗಿದ್ದಾಳೆ ಎಂದು ತಿಳಿಸಿದ್ದಾನೆ. ಮದುವೆಯಾಗಿ 17 ವರ್ಷಗಳಾಗಿದ್ದು, ನಮಗೆ ಮೂರು ಮಕ್ಕಳಿದೆ. ಹೆಂಡತಿಯನ್ನು ಹುಡುಕಿಕೊಡಿ ಎಂದು ನಯೀಂ ಪೊಲೀಸರಲ್ಲಿ ಅಂಗಲಾಚಿದ್ದಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ