ದೊಣ್ಣೆಯಿಂದ ತಲೆಗೆ ಹೊಡೆತ, ತಂದೆಯಿಂದ ಮಗಳ ಕೊಲೆ!

ಭಾನುವಾರ, 19 ಮಾರ್ಚ್ 2023 (10:39 IST)
ಬೆಂಗಳೂರು : ತಂದೆಯೊಬ್ಬ ತನ್ನ ಮಗಳನ್ನು ಬರ್ಬರವಾಗಿ ಕೊಲೆಗೈದ ಘಟನೆ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಆಶಾ (32) ಕೊಲೆಯಾದ ಮಗಳು. ಈಕೆಯನ್ನು ತಂದೆ ರಮೇಶ್ (60) ಕೊಲೆ ಮಾಡಿದ್ದಾರೆ.

ಮದುವೆಯಾಗಿದ್ದ ಆಶಾ ಗಂಡನಿಂದ ದೂರವಾಗಿದ್ದು, ತಂದೆ ಮನೆಯಲ್ಲೇ ಉಳಿದುಕೊಂಡಿದ್ದಳು. ಅಲ್ಲದೇ ತಂದೆ, ತಾಯಿ, ತಂಗಿಗೆ ಕಿರುಕುಳ ನೀಡುತ್ತಿದ್ದಳು. ಇದೇ ಕಾರಣಕ್ಕೆ ಬುಧವಾರ ರಾತ್ರಿ ಮನೆ ಮಂದಿ ಜೊತೆ ಜಗಳವಾಗಿತ್ತು.

ಈ ವೇಳೆ ತಂದೆ ರಮೇಶ್ ದೊಣ್ಣೆಯಿಂದ ತಲೆಗೆ ಹೊಡೆದಿದ್ದರು. ಘಟನೆಯಿಂದಾಗಿ ಆಶಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ತಂದೆ ರಮೇಶ್ನನ್ನು ಕೋಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ