ಕಲ್ಯಾಣ ಯೋಜನೆ ಕಡೆಗಣಿಸಿದ ಬಜೆಟ್?

ಬುಧವಾರ, 2 ಫೆಬ್ರವರಿ 2022 (08:21 IST)
ಬೆಂಗಳೂರು : ಕೇಂದ್ರ ಮಂಡಿಸಿದ 2022-23ರ ಬಜೆಟ್ ನಲ್ಲಿ ಕಲ್ಯಾಣ ಯೋಜನೆಗಳಿಗೆ ಯಾವುದೇ ನೆರವು ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಯಾವುದೇ ನೆರವು ನೀಡಿಲ್ಲ ಎಂಬ ಆರೋಪವಿದೆ.

ಬಡವರ ಬಗ್ಗೆ ಕಾಳಜಿ ತೋರಿಸಿಲ್ಲ. ಜೊತೆಗೆ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ನಿರ್ಮಲಾ ಸೀತರಾಮನ್ ಅವರು ಇಡೀ ದೇಶಕ್ಕೆ ಹಣಕಾಸು ಸಚಿವೆ ಹೌದು, ಆದರೆ  ಕರ್ನಾಟಕದಿಂದ ಆಯ್ಕೆಯಾದವರು, ರಾಜ್ಯದ ಬಗ್ಗೆ ಸ್ವಲ್ಪ ಯೋಚನೆ ಇರಬೇಕಿತ್ತು.

ರಾಜ್ಯದ ಜನತೆ ನನಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂಬ ಕನಿಷ್ಠ ಯೋಚನೆ ಇರಬೇಕಿತ್ತು. 25 ಜನ ಸಂಸದರಿಗೆ ಕೇಳುವ ಧೈರ್ಯ ಇಲ್ವಾ? ಎಂದು ತಜ್ಞರು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ