ವಿಧಾನಸೌಧಕ್ಕೆ ಆಂಧ್ರ ಸರ್ಕಾರದ ಸಚಿವರ ನಿಯೋಗ ಭೇಟಿ

ಬುಧವಾರ, 25 ಜನವರಿ 2023 (09:30 IST)
ಬೆಂಗಳೂರು : ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಜಮೀನುಗಳ ಮಂಜೂರಾತಿ ನಿಯಮ, ನಿಬಂಧನೆಗಳ ಅಧ್ಯಯನಕ್ಕೆ ಆಂಧ್ರ ಸರ್ಕಾರದ ಕಂದಾಯ ಸಚಿವರ ನೇತೃತ್ವದ ನಿಯೋಗ ರಾಜ್ಯಕ್ಕೆ ಆಗಮಿಸಿದೆ.

ಇಂದು ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಆಂಧ್ರಪ್ರದೇಶದ ಕಂದಾಯ ಸಚಿವರ ನೇತೃತ್ವದ ಸಚಿವರು ಹಾಗೂ ಉನ್ನತ ಅಧಿಕಾರಿಗಳ ನಿಯೋಗವು ವಿಧಾನಸೌಧದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಸಚಿವ ಆರ್. ಅಶೋಕ್ ಅವರು ರಾಜ್ಯ ಕಂದಾಯ ಇಲಾಖೆ ತೆಗೆದುಕೊಂಡ ಮಹತ್ವದ ತೀರ್ಮಾನಗಳು, ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟರು.

ಕಂದಾಯ ಇಲಾಖೆಯ ಪಿಂಚಣಿ ವ್ಯವಸ್ಥೆ, ಭೂ ಪರಿವರ್ತನೆ ಸಮಯಾವಧಿ ಇಳಿಕೆ, ಕಾಫಿ ಶುಂಠಿ ಬೆಳೆಗಾರರಿಗೆ ಜಮೀನನ್ನು 30 ವರ್ಷದ ಅವಧಿಗೆ ಲೀಸ್ ನೀಡುವುದು, ಕಂದಾಯ ದಾಖಲೆಗಳನ್ನು ಉಚಿತವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವುದು ಮುಂತಾದವುಗಳ ಕುರಿತು ಸಚಿವ ಅಶೋಕ್ ಆಂಧ್ರದ ನಿಯೋಗಕ್ಕೆ ಮಾಹಿತಿ ನೀಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ