ವೈದ್ಯರು ನೀಡಿದ ಇಂಜೆಕ್ಷನ್ ಗೆ ಬಾಣಂತಿ ಬಲಿ?

ಬುಧವಾರ, 4 ಜುಲೈ 2018 (17:05 IST)
ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದ ಮಹಿಳೆಗೆ ಸರ್ಕಾರಿ ವೈದ್ಯರು ಇಂಜಿಕ್ಷನ್ ಕೊಟ್ಟ ನಂತರ ಗರ್ಭಿಣಿಗೆ  ಏರುಪೇರಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ದಾವಣಗೆರೆಯ ಮಾರ್ಕೆಟ್ ಬಳಿ ಇರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.

ದಾವಣಗೆರೆಯ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಮಹಿಳೆ ಷರೀಫ ಭಾನು ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ರು. ನಿನ್ನೆ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಳು.  ಆದ್ರೆ ಇಂದು ವೈದ್ಯರು ಬಾಣಾಂತಿಗೆ ಇಂಜಿಕ್ಷನ್ ಕೊಟ್ಟಿದ್ದಾರೆ.‌  ಆಗ ಆರೋಗ್ಯದಲ್ಲಿ ಏರುಪೇರಾಗಿ  ಆಸ್ಪತ್ರೆಯಲ್ಲಿಯೇ ಬಾಣಂತಿ ‌ಸಾವನ್ನಪ್ಪಿದ್ದಾಳೆ.

ಮಹಿಳೆ ಸಾವನ್ನಪ್ಪಿದ ನಂತರ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.  ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಹಿಳೆಯ ಸಂಬಂಧಿಕರು ಅರೋಪ ಮಾಡುತ್ತಿದ್ದಾರೆ. ಇನ್ನು ಸ್ಥಳಕ್ಕೆ ಗಾಂಧಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ