ಪ್ರಥಮ ದರ್ಜೆ ಸಹಾಯಕಿಯನ್ನು ಹಾಸಿಗೆಗೆ ಕರೆದ ಮುಖ್ಯಶಿಕ್ಷಕ

ಶನಿವಾರ, 23 ಡಿಸೆಂಬರ್ 2017 (11:32 IST)
ಪ್ರಥಮ ದರ್ಜೆ ಸಹಾಯಕಿಯನ್ನು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪೋಲಿ ಮಾತುಗಳ ಮೂಲಕ ಲೈಂಗಿಕ ಕಿರುಕುಳ ನೀಡಿ ಹಾಸಿಗೆಗೆ ಕರೆದಿದ್ದಾನೆ ಎಂದು ಆರೋಪಿಸಲಾಗಿದೆ.

ಕ್ಯಾತಸಂದ್ರದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ ಅನುಕಂಪದ ಆಧಾರದ ಮೇಲೆ ಎಫ್‍ಡಿಎ ಕೆಲಸಕ್ಕೆ ಸೇರಿದ ಮಹಿಳಾ ಸಿಬ್ಬಂದಿಗೆ ಕೆಲಸ ಹೇಳಿಕೊಡುವ ನೆಪದಲ್ಲಿ ಏಕಾಂತವಾಗಿ ಕಚೇರಿಗೆ ಕರೆಸಿಕೊಂಡು ಆಕೆಯ ಅಂಗಾಂಗಗಳ ವರ್ಣನೆ ಮಾಡಿದ್ದಾನೆ. ನನ್ನ ಜೊತೆ ಸಹಕರಿಸು, ಎಲ್ಲ ಕೆಲಸವನ್ನೂ ನಿನಗೆ ಕಲಿಸಿ ಕೊಡುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಕಾಟ ಮಿತಿ ಮೀರಿದಾಗ ಮುಖ್ಯ ಶಕ್ಷಕ ಶಿವಣ್ಣನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೂ, ಚೇಷ್ಟೆ ನಿಲ್ಲಿಸಲಿಲ್ಲ. ಕೊನೆಗೆ ಡಿಡಿಪಿಐ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಮುಖ್ಯ ಶಿಕ್ಷಕ ಶಿವಣ್ಣ ಅಮಾನತುಗೊಂಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ