ಪ್ರಾಂಶುಪಾಲನಿಂದ ಅತ್ಯಾಚಾರಕ್ಕೆ ಯತ್ನ, ಸಹಾಯ ಕೇಳಿದರೆ, ಇಬ್ಬರಿಗೂ ಸಹಕರಿಸು ಎಂದ ವಾರ್ಡನ್
ಶುಕ್ರವಾರ, 22 ಡಿಸೆಂಬರ್ 2017 (09:03 IST)
ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಕೆಲಸ ಮಾಡುವ ಮಹಿಳೆಗೆ ಪ್ರಾಂಶುಪಾಲ ಹಾಗೂ ವಾರ್ಡನ್ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಅಫಜಲಪುರ್ ತಾಲೂಕಿನ ಕರ್ಜಗಿ ಗ್ರಾಮದ ಶಾಲೆಯಲ್ಲಿ ಮೂರು ತಿಂಗಳ ಹಿಂದೆ ಶಾಲೆ ಬಿಟ್ಟ ಸಮಯದಲ್ಲಿ ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಕೆಲಸ ಮಾಡುವ ಮಹಿಳೆಯ ಮೇಲೆ ಪ್ರಾಂಶುಪಾಲ ಸೈಫನ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡಿದ್ದಾಳೆ.
ಈ ವಿಷಯವನ್ನು ವಾರ್ಡನ್ ಜಗನ್ನಾಥ ಬಳಿ ಹೇಳಲು ಹೋದಾಗ ನೀನು ತಾತ್ಕಾಲಿಕ ಸಿಬ್ಬಂದಿಯಾಗಿದ್ದು, ನಮ್ಮಿಬ್ಬರೊಂದಿಗೂ ಸಹಕರಿಸು ಕೆಲಸ ಕಾಯಂಗೊಳಿಸುತ್ತೇವೆ ಎಂದು ಮತ್ತೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದಕ್ಕೆ ಒಪ್ಪದ ಕಾರಣ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
ಕಿರುಕುಳದಿಂದ ನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆದರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಬಲವಾದ ಸಾಕ್ಷ್ಯವಿಲ್ಲವೆಂದು ಪೊಲೀಸರು ದೂರ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.