ಹಣದಾಸೆಗಾಗಿ ಸ್ನೇಹಿತನನ್ನೇ ಕಾರಿನಲ್ಲಿ ಅಪಹರಿಸಿ, ಹಲ್ಲೆಗೈದು, ಲಕ್ಷಾಂತರ ರೂಪಾಯಿ ಹಣ ವಸೂಲಿ

ಸೋಮವಾರ, 22 ನವೆಂಬರ್ 2021 (21:09 IST)
ಬೆಂಗಳೂರು: ಹಣದಾಸೆಗಾಗಿ ಸ್ನೇಹಿತನನ್ನೇ ಕಾರಿನಲ್ಲಿ ಅಪಹರಿಸಿ, ಹಲ್ಲೆಗೈದು, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದಡಿ ಐವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಜ್ವಲ್, ಅನಿಲ್ ಕುಮಾರ್, ದೀಪು ಸೇರಿ ಐವರು ಬಂಧಿತರು.
ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿರುವ ಅಭಿಷೇಕ್, ಕಾಲೇಜು ಮುಗಿದ ನಂತರ ರಿಯಲ್ ಎಸ್ಟೇಟ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈತನ ತಂದೆ ಆಟೋ ಚಾಲಕನಾಗಿದ್ದ ನಾಗರಬಾವಿ ಬಳಿಯ ಪಾಪರೆಡ್ಡಿಪಾಳ್ಯ ಬಳಿ ವಾಸವಾಗಿದ್ದರು. ರಿಯಲ್ ಎಸ್ಟೇಟ್ ಕೆಲಸ ಮಾಡುವ ಕಚೇರಿಯಲ್ಲಿ ನಿರಂತರ ಹಣದ ವಹಿವಾಟು ನಡೆಸುವ ಸಲುವಾಗಿ ಅಭಿಷೇಕ್ ಬಳಿ ಯಾವಾಗಲೂ ನಗದು ಇರುತ್ತಿತ್ತು. ಇದನ್ನು ಕಂಡ ಸ್ನೇಹಿತರು ಅಭಿಷೇಕ್ ಶ್ರೀಮಂತ ಎಂದು ಭಾವಿಸಿ ಅಪಹರಣ ಮಾಡಲು ಹೊಂಚು ಹಾಕಿದ್ದಾರೆ. ಅಪಹರಣಕ್ಕಾಗಿ ನೆರವು ಪಡೆಯಲು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರಜ್ವಲ್, ಅನಿಲ್ ಕುಮಾರ್ ಹಾಗೂ ದೀಪು ಎಂಬವರಿಗೆ ಮಾಹಿತಿ ನೀಡಲಾಗಿದೆ. ಇದರಂತೆ ನ.18ರಂದು ಅಂದುಕೊಂಡಂತೆ ಮುಸುಕುವೇಷ ಧರಿಸಿ ಕಾರಿನಲ್ಲಿ ಅಭಿಷೇಕ್‌ನನ್ನು ಅಪಹರಿಸಿದ್ದಾರೆ. ನಂತರ ಡಾಬಸ್ ಪೇಟೆ ಬಳಿ ಹೋಗಿ ಅಲ್ಲಿಂದ ದೇವನಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಭಿಷೇಕ್ ತಂದೆಗೆ ಕರೆ ಮಾಡಿ 1 ಲಕ್ಷ ರೂಪಾಯಿಗೆ ಬೇಡಿಕೆ ಕೂಡ ಇದೆ. ಅಂತಿಮವಾಗಿ ಅಭಿಷೇಕ್ ನಿಂದ 70 ಸಾವಿರ ಹಣ ಪಡೆದಿದ್ದರು. ಜೊತೆಗೆ, ಅಪಹರಣ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ