ಆರ್ ಎಸ್ಎಸ್ ವೇಷದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ರೈ: ಇವರನ್ನೂ ಸಸ್ಪೆಂಡ್ ಮಾಡ್ತೀರಾ ಎಂದ ನೆಟ್ಟಿಗರು
ಆರ್ ಎಸ್ಎಸ್ ಪಥ ಸಂಚಲನದಲ್ಲಿ, ಚಟುವಟಿಕೆಗಳಲ್ಲಿ ಭಾಗಿಯಾಗುವ ಸರ್ಕಾರೀ ನೌಕರರನ್ನು ಸಸ್ಪೆಂಡ್ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದರು. ಅದರಂತೆ ಓರ್ವ ಪಿಡಿಒನನ್ನು ಈಗಾಗಲೇ ಅಮಾನತು ಮಾಡಲಾಗಿತ್ತು.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಅಶೋಕ್ ರೈ ಗಣವೇಷಧಾರಿಯಾಗಿ ಮಗನ ಜೊತೆ ಪೋಸ್ ಕೊಟ್ಟಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಶೋಕ್ ರೈ ಕೂಡಾ ಒಂದು ಕಾಲದಲ್ಲಿ ಆರ್ ಎಸ್ಎಸ್ ನಿಂದಲೇ ಬಂದವರು. ಹೀಗಾಗಿ ಅವರು ಆರ್ ಎಸ್ಎಸ್ ಸಮವಸ್ತ್ರದಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದರು.
ಇದೀಗ ಆ ಫೋಟೋ ವೈರಲ್ ಮಾಡಿರುವ ನೆಟ್ಟಿಗರು ನೋಡಿ ನಿಮ್ಮ ಕಾಂಗ್ರೆಸ್ ನಾಯಕರೂ ಆರ್ ಎಸ್ಎಸ್ ಹಿನ್ನಲೆಯಿಂದ ಬಂದವರಿದ್ದಾರೆ. ಅವರನ್ನೂ ಸಸ್ಪೆಂಡ್ ಮಾಡ್ತೀರಾ ಎಂದು ಪ್ರಿಯಾಂಕ್ ಖರ್ಗೆಗೆ ಪ್ರಶ್ನೆ ಮಾಡಿದ್ದಾರೆ.