ಭಾರೀ ಮಳೆಯ ಹಿನ್ನಲೆ; ಕೊಡಗು ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ

ಶನಿವಾರ, 20 ಜುಲೈ 2019 (11:57 IST)
ಕೊಡಗು : ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.



ಜುಲೈ 18ರಿಂದ 23 ರವರೆಗೆ ರಾಜ್ಯಾದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಿತ್ತು. ಆದರೆ ಇದೀಗ ಆರೆಂಜ್ ಅಲರ್ಟ್ ಗಿಂತ ಹೆಚ್ಚಿನ ಅಂದ್ರೆ 204.5 ಎಂಎಂ ಮಳೆ ಬೀಳುವ ಸಾಧ್ಯತೆವಿರುವ ಹಿನ್ನೆಲೆಯಲ್ಲಿ ಇದೀಗ ಕೊಡಗಿನಲ್ಲಿ ಇಂದಿನಿಂದ 22ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.


ಈಗಾಗಲೇ ಎನ್‍ಡಿ..ಆರ್‍.ಎಫ್ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು ಅನಾಹುತಗಳು ಸಂಭವಿಸಿದರೆ ತಕ್ಷಣವೇ ಅ ಸ್ಥಳಗಳಿಗೆ ತಲಪುವ ವ್ಯವಸ್ಥೆಗಳು ಹಾಗೂ ಜನರಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿದೆ. ಹಾಗೇ ಪ್ರಾಕೃತಿಕ ವಿಕೋಪ ಸಮಸ್ಯೆ ಉಂಟಾದರೆ  ಸಹಾಯವಾಣಿ 08272 – 221077 ತುರ್ತು ಟೋಲ್ ಫ್ರೀ ನಂಬರ್ ಸಂಪರ್ಕಿಸುವಂತೆ ಕೊಡಗು ಜಿಲ್ಲಾಡಳಿತ ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ