ವಿಂಡೀಸ್ ಸರಣಿಗೆ ಧೋನಿ ಆಯ್ಕೆಯಾಗಲ್ಲ? ನಿವೃತ್ತಿ ಘೋಷಣೆ ಸಾಧ್ಯತೆ!

ಶನಿವಾರ, 13 ಜುಲೈ 2019 (09:18 IST)
ಮುಂಬೈ: ವಿಶ್ವಕಪ್ ಸೋಲಿನಿಂದ ಹೊರಬರುವ ಮೊದಲೇ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ಸಿದ್ಧವಾಗಬೇಕಿದೆ.


ಜುಲೈ 17 ಮತ್ತು 18 ರಂದು ಮುಂಬೈಯಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ವಿಂಡೀಸ್ ಸರಣಿಗೆ ತಂಡ ಪ್ರಕಟಿಸಲಿದೆ. ಕೆಲವು ಮೂಲಗಳ ಪ್ರಕಾರ ಈ ಸರಣಿಗೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು. ಜತೆಗೆ ಧೋನಿಯೂ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಒಂದು ವೇಳೆ ಧೋನಿ ಆಯ್ಕೆಯಾಗದೇ ಇದ್ದಲ್ಲಿ ನಿವೃತ್ತಿ ಹೇಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಕೂಡಾ ಧೋನಿ ನಿವೃತ್ತಿ ಬಗ್ಗೆ ತಮ್ಮಲ್ಲಿ ಏನೂ ಹೇಳಿಲ್ಲ ಎಂದಿದ್ದಾರೆ. ಹಾಗಾಗಿ 38 ವರ್ಷದ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನ ಮುಂದಿನ ನಡೆ ಏನೆಂಬುದು ನಿಗೂಢವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ