ಶಾಸಕ ಬಾಲಕೃಷ್ಣ ಕೊಬ್ಬರಿ ತುಂಬಿದ ಮನೆಗೆ ಬೆಂಕಿ

ಗುರುವಾರ, 3 ನವೆಂಬರ್ 2022 (17:39 IST)
ಶಾಸಕ ಬಾಲಕೃಷ್ಣ ಮನೆಗೆ ಕೊಬ್ಬರಿ ತುಂಬಿದರು.ಆ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗ್ಗುಲಿ ಕಾರ್ ಸೇರಿದಂತೆ ಲಕ್ಷಾಂತರ ರೂ ಕೊಬ್ಬರಿ ಬೆಂಕಿಗಾಹುತಿಯಾಗಿದೆ.ಚನ್ನರಾಯಪಟ್ಟಣದ ಚೋಳೇನಹಳ್ಳಿಯ ಗ್ರಾಮದಲ್ಲಿರುವ ಮನೆಯ ಕೂಗಳತೆ ದೂರಲ್ಲಿರುವ ಕೊಬ್ಬರಿ ಕಾಯಿ ತುಂಬಿದ ಮನೆಗೆ ಬೆಂಕಿ ತಗಳಿದ್ದು, ಬೆಳಿಗ್ಗಿನ ಜಾವ ಬೆಂಕಿ ಅವಘಡ ಸಂಭವಿಸಿದೆ.ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ತಿಳಿದುಬಂದಿಲ್ಲ.ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸಪಾಡುತ್ತಿದ್ದಾರೆ.ಚನ್ನರಾಯಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ