ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಗುರುವಾರ, 3 ನವೆಂಬರ್ 2022 (17:29 IST)
ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಳಿಯ ಸುಮನ್ ಹಳ್ಳಿ ಬ್ರಿಡ್ಜ್ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಾನಾಪ್ಪಿದ್ದಾನೆ.ಹಾಪ್ ಹೆಲ್ಮೆಟ್ ಧರಿಸಿದ್ದ ಯುವಕನ ತಲೆಯ ಭಾಗಕ್ಕೆ ಪೆಟ್ಟಾಗಿ ಸಾವು ಸಂಭವಿಸಿದೆ.ಸುಮನ್ ಹಳ್ಳಿಯಿಂದ ಲಗ್ಗೆರೆ ಕಡೆ  ಬಸ್ ಚಲಿಸುತ್ತಿತ್ತು.ಯಶವಂತಪುರ ಟು ಬನಶಂಕರಿಗೆ ಕಡೆಗೆ ಬಸ್ ಸಂಚಾರಿಸುತಿತ್ತು.ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್ ಗೆ ಬಸ್ ಡಿಕ್ಕಿಹೊಡೆದಿದೆ.ಬೈಕ್ ಸವಾರನಿಗೆ ತಲೆಗೆ ಪೆಟ್ಟು ಬಿದ್ದು ಸಾವು ಸಂಭವಿಸಿದೆ.ಬಸ್ ಚಾಲಕನಿಗೆ ಸಾರ್ವಜನಿಕರು ಥಳಿಸಿದ್ದಾರೆ.
 
ಇನ್ನೂ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಮಾಡುತ್ತಿದ್ದಾರೆ.ಬಸ್ ಚಾಲಕ ಹಾಗೂ ಬಸ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಯುವಕನ ಗುರುತ ಇನ್ನು ಪತ್ತೆಯಾಗಿಲ್ಲ.ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತ ದೇಹವನ್ನ ಕೆ.ಸಿ.ಜನರಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ‌.ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ