ಪ್ರೀತಿಸಿ ಮದುವೆಯಾದ ಗಂಡನನ್ನೇ ಪ್ರಿಯಕರನಿಂದ ಕೊಲ್ಲಿಸಿದ ಖಿಲಾಡಿ ಹೆಣ್ಣು
ಮಂಗಳವಾರ, 14 ಜನವರಿ 2020 (16:06 IST)
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಂಗಸ್ವಾಮಿ – ರೂಪಾ ಪರಸ್ಪರ ಪ್ರೀತಿಸಿ ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿವೆ.
ಹೀಗಿದ್ದರೂ ಮತ್ತೊಬ್ಬನ ತೆಕ್ಕೆಗೆ ಜಾರಿದ ರೂಪಾ ಅನೈತಿಕ ಸಂಬಂಧದಲ್ಲಿ ಸುಖ ಅರಿಸೋಕೆ ಹೋದಳು.
ಪತ್ನಿಯು ಪರಪುರುಷನೊಂದಿಗೆ ಚಕ್ಕಂದವಾಡೋದು ರಂಗಸ್ವಾಮಿ ತಿಳಿದಿದೆ. ಹೀಗಾಗಿ ಗಲಾಟೆ ನಡೆದಿದೆ. ಕೊನೆಗೆ ಪ್ರಿಯಕರ ಮುತ್ತುರಾಜ್ ನೊಂದಿಗೆ ಸೇರಿ ರೂಪಾ ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ.
ಒಂದೆರಡು ವರ್ಷ ಪ್ರಿಯಕರ ಮುತ್ತುರಾಜ ಮುತ್ತಿನ ಗುಂಗಲ್ಲಿ ಮೈಮರೆತಿದ್ದ ರೂಪಾ ಕೊನೆಗೆ ಆತನೊಂದಿಗೂ ಗಲಾಟೆ ಮಾಡಿಕೊಂಡಿದ್ದಾಳೆ. ಆಗ ಕೊಲೆ ವಿಷಯ ಹೊರಗೆ ಬಿದ್ದಿದ್ದು, ಪೊಲೀಸರಿಗೆ ವಿಷಯ ತಲುಪಿದೆ. ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.