ಕೆಸರುಗದ್ದೆಗೆ ಇಳಿದು ಎಂಜಾಯ್ ಮಾಡಿದ ಶಾಸಕ

ಸೋಮವಾರ, 6 ಆಗಸ್ಟ್ 2018 (15:26 IST)
ಮಲೆನಾಡಿನಲ್ಲಿ ಮಳೆ ಅಬ್ಬರಿಸಿದ್ದು ಎಲ್ಲೆಲ್ಲೂ ಗ್ರಾಮೀಣ ಕ್ರೀಡಾಕೂಟಗಳು ನಡೆಯುತ್ತಿವೆ. ಅದ್ರಲ್ಲೂ ಕೆಸರುಗದ್ದೆ ಕ್ರೀಡಾಕೂಟಗಳು ಹೆಚ್ಚು ಆಯೋಜನೆಗೊಳ್ಳುತ್ತಿದ್ದು, ಶಾಸಕರೊಬ್ಬರು ಕೆಸರುಗದ್ದೆಗೆ ಇಳಿದು ಎಂಜಾಯ್ ಮಾಡಿದ್ರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಸವನದಿಣ್ಣೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಕ್ರೀಡಾಕೂಟದಲ್ಲಿ ಸ್ವತಃ ಶಾಸಕರೇ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗಿಯಾಗಿ ಎಂಜಾಯ್​ ಮಾಡಿದ್ದಾರೆ. ರೋಟರಿ ಸಂಸ್ಥೆ ವತಿಯಿಂದ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದ ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ, ನಂತರ ತಾವೇ ಕೆಸರುಗದ್ದೆಯಲ್ಲಿ ಇಳಿದು ಮಕ್ಕಳೊಂದಿಗೆ ಮಕ್ಕಳಾಗಿ ತಾವು ರೇಸ್​ ನಲ್ಲಿ ಪಾಲ್ಗೊಂಡು ನಾ ಮುಂದು, ತಾ ಮುಂದು ಎಂದು ಓಡಿದ್ರು. 

ಈ ವೇಳೆ ಪಕ್ಕಾ ಗ್ರಾಮೀಣ ಉಡುಪಿನಲ್ಲಿ ಕೆಸರುಗದ್ದೆಗೆ ಇಳಿದ ಶಾಸಕರು, ತಾವು ಗ್ರಾಮೀಣ ಪ್ರತಿಭೆ ಎಂಬುದನ್ನು ತೋರಿಸಿಕೊಟ್ರು. ಈ ವೇಳೆ ಮಾತನಾಡಿದ ಅವರು,  ಕೆಸರುಗದ್ದೆಯಲ್ಲಿ ಆಟವಾಡುವುದು ಕೇವಲ ಕ್ರೀಡೆಯಲ್ಲದೇ ಆರೋಗ್ಯದ ವೃದ್ಧಿಗೂ ಸಹಕಾರಿ. ಅಲ್ಲದೇ ವಿವಿಧ ರೋಗಗಳ ನಿವಾರಣೆಗೂ ಈ ಮಣ್ಣಿನಲ್ಲಿರುವ ಕಬ್ಬಿಣದ ಅಂಶ ರೋಗ ನಿರೋಧಕವಾಗಿ ಕೆಲಸಮಾಡುತ್ತದೆ ಎಂದು ಹೇಳಿದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ