ಬ್ಯೂಟಿ ಕ್ವೀನ್ ಮಾಡಿದ್ದಕ್ಕೆ ತನಗೆ ಬೇಕಾದವರಿಗೆ ಲೈಂಗಿಕ ಸುಖ ನೀಡು ಎಂದಳಂತೆ!
ತನ್ನನ್ನು ನೈಜೀರಿಯಾ ಬ್ಯೂಟಿ ಕ್ವೀನ್ ಆಗಿ ಆಯ್ಕೆ ಮಾಡಿದ ಸಂಸ್ಥೆಯ ಮಹಿಳಾ ಆಯೋಜಕಿ ತನ್ನ ಪರಿಚಯದ ಪುರುಷರ ಜತೆ ಮಲಗು ಎಂದು ಒತ್ತಾಯ ಮಾಡುತ್ತಿದ್ದಾಳೆ ಎಂದು ಅಗ್ಬಾನಿ ಸಾಮಾಜಿಕ ಜಾಲತಾಣದ ಮೂಲಕ ಅಳು ತೋಡಿಕೊಂಡಿದ್ದಾರೆ.
ತಾನು ಹೇಳಿದ ಹಾಗೆ ಕೇಳದೇ ಹೋದರೆ ನಿನ್ನ ಬಗ್ಗೆ ಅಪಪ್ರಚಾರ ಮಾಡುತ್ತೇನೆಂದು ಬೆದರಿಕೆ ಹಾಕುತ್ತಿದ್ದಾಳೆ ಎಂದು ಅಗ್ಬಾನಿ ಬಹಿರಂಗಪಡಿಸಿದ್ದಾರೆ. ಇದರ ಬಗ್ಗೆ ತನಗೆ ಆಯೋಜಕಿ ಮಾಡಿದ ವ್ಯಾಟ್ಸಪ್ ಸಂದೇಶವನ್ನೂ ಪ್ರಕಟಿಸಿದ್ದಾಳೆ. ಆದರೆ ಆ ಮಹಿಳಾ ಆಯೋಜಕಿಯ ಹೆಸರು ಬಹಿರಂಗಪಡಿಸಿಲ್ಲ.