ಹುಚ್ಚುನಾಯಿ ದಾಳಿಯಿಂದ ಗಂಭೀರ ಗಾಯಗಳಾಗಿ ಸಾಕಷ್ಟು ಮಂದಿ ಆಸ್ಪತ್ರೆಗೆ ದಾಖಲು!

ಸೋಮವಾರ, 11 ಸೆಪ್ಟಂಬರ್ 2023 (09:07 IST)
ಕಲಬುರಗಿ : ಹುಚ್ಚು ನಾಯಿ ದಾಳಿಯಿಂದಾಗಿ 13 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಹಾಗೂ ಬೆನಕಪಳ್ಳಿ ಗ್ರಾಮದಲ್ಲಿ ನಡೆದಿದೆ.

ಶನಿವಾರ ಸಂಜೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮ ಮತ್ತು ಬೆನಕಪಳ್ಳಿ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಸಂಜೆ ಮಳೆಯಾಗುತ್ತಿದ್ದರಿಂದ ಜಮೀನಿನಿಂದ ಜನರು ಮನೆಗೆ ಬೇಗ ವಾಪಸ್ ಆಗುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ಮಳೆಯಿಂದ ರಕ್ಷಣೆ ಪಡೆಯಲು ಮನೆಯೊಂದರ ಬಳಿ ಆಶ್ರಯ ಪಡೆದಿದ್ದರು. ಈ ಸಂದರ್ಭ ಹುಚ್ಚು ನಾಯಿ ಆ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ.

ನಂತರ ಅದೇ ಹುಚ್ಚು ನಾಯಿ ಪಕ್ಕದ ಊರಾದ ಐನಾಪುರ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಐನಾಪುರ ಗ್ರಾಮದಲ್ಲಿ ಸಹ ಮಹಿಳೆಯರು, ಪುರುಷರು ಸೇರಿದಂತೆ ಬರೋಬ್ಬರಿ 12 ಜನರ ಮೇಲೆ ಅಟ್ಯಾಕ್ ಮಾಡಿದೆ. ಗಾಯಾಳುಗಳನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಕಳೆದ ಅನೇಕ ದಿನಗಳಿಂದ ಈ ಹುಚ್ಚು ನಾಯಿ ಗ್ರಾಮಸ್ಥರ ನೆಮ್ಮದಿ ಕೆಡಿಸಿದ್ದು, ಅದನ್ನು ಸೆರೆಹಿಡಿಯಬೇಕೆಂದು ಸಂಬಂಧಿಸಿದವರಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ