ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಶನಿವಾರ, 9 ಸೆಪ್ಟಂಬರ್ 2023 (18:40 IST)
ರೊಟ್ಟಿ ಹಳಸಿತ್ತು ,ನಾಯಿ ಹಸಿದಿತ್ತು ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾಜಿ‌ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಈ ರೀತಿ ಹೇಳಿಕೆ ಕೊಟ್ಟವರು ಯಾರು ? ಯಾರ ಹೊಟ್ಟೆ ಹಸಿದಿತ್ತು ಎಂಬುದು ನಂಗೆ ಗೊತ್ತಿದೆ.2018 ರಲ್ಲಿ ಏನಾಗಿತ್ತು ನೆನಪಿಸಿಕೊಳ್ಳಲಿ.ಕಾಂಗ್ರೆಸ್ ಸರ್ಕಾರ ಜನ ಆಯ್ಕೆ ಮಾಡಿದ್ದಾರೆ.ಒಳ್ಳೆ ಅಭಿವೃದ್ಧಿ ಕೆಲಸ ಮಾಡ್ಲಿ ಅಂತಾ ,ಅದು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸಮಂಜಸವಲ್ಲ.ಬಿಜೆಪಿ ಜೆಡಿಎಸ್  ಮೈತ್ರಿ ವಿಚಾರವಾಗಿ ಚರ್ಚೆಯಾಗ್ತಿದೆ.ಇನ್ನೂ ನಿರ್ಧಾರವಾಗಿಲ್ಲ.ನೀವೇ ಎಲ್ಲ ಘೋಷಣೆ ಮಾಡಬೇಡಿ. ಇನ್ನೂ ಕೇವಲ ಚರ್ಚೆಯಾಗಿದೆ ಅಷ್ಟೇ ಮೈತ್ರಿ ಆಗಿಲ್ಲ. ನಮ್ಮ ನಿಲುವುಗಳಿಗೆ ನಾವು ಬದ್ಧವಾಗಿದ್ದೇವೆ ಅಂತಾ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ