ಕುರಿ ಸತ್ತರೆ ಪರಿಹಾರ ಇಲ್ಲ.. ಡಿಸಿ ಕಾರು ಪೆಟ್ರೋಲ್ಗೆ ಹಣ ಇಲ್ಲ: ಯತ್ನಾಳ್ ವಾಗ್ದಾಳಿ

ಭಾನುವಾರ, 10 ಸೆಪ್ಟಂಬರ್ 2023 (09:05 IST)
ಕೊಪ್ಪಳ : ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿ ಆಗಿದ್ದು, ಕುರಿ ಸತ್ತರೆ ಪರಿಹಾರ ನೀಡುತ್ತಿಲ್ಲ. ಕಾರವಾರ ಡಿಸಿ ಕಾರಿಗೆ ಡೀಸೆಲ್ ಹಾಕಲು ಹಣ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರಿಗೆ ನೀಡಲು ಸರ್ಕಾರದ ಬಳಿ ಅನುದಾನ ಇಲ್ಲ. ಶಾಸಕರಿಗೆ ಅನುದಾನ ನೀಡಿದರೆ ಮಾತ್ರ, ಅವರು ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯ. ಇದರಿಂದ ಶಾಸಕರಿಗೆ ಗ್ರಾಮೀಣ ಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ರೈತರ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದ ಶಾಸಕರಿಗೆ ಅಸಮಾಧಾನ ಹೆಚ್ಚಾಗಿದೆ. ನಮ್ಮ ಪಾರ್ಟಿ ಒಡೆಯಬೇಕು ಎನ್ನುವ ಇವರದ್ದೇ ಪಾರ್ಟಿ ಒಡೆದು ಹೋಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪರೋಕ್ಷ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನಲ್ಲಿ ಅತೃಪ್ತ ಆತ್ಮ ಹೆಚ್ಚಾಗಿವೆ. ಕೆಲವರಿಗೆ ಮಂತ್ರಿ ಮಾಡಿಲ್ಲ ಅಂತ ಅಸಮಾಧಾನ ಇದೆ.

ಹಲವರಿಗೆ ಅನುದಾನ ನೀಡಿಲ್ಲ ಎಂದು ಬೇಸರಗೊಂಡಿದ್ದಾರೆ. ಇವೆಲ್ಲ ಅವರ ಪಕ್ಷದ ಅತೃಪ್ತ ಆತ್ಮಗಳಾಗಿವೆ. ಇಂಥ ಅತೃಪ್ತ ಆತ್ಮ ಕೊಪ್ಪಳದಲ್ಲಿಯೂ ಒಂದಿದೆ. ವಿನಯ ಕುಲಕರ್ಣಿ, ಬಸವರಾಜ ರಾಯರಡ್ಡಿ ಅಂತಹ ಅತೃಪ್ತ ಆತ್ಮಗಳಿಂದ ಸರ್ಕಾರ ಏನಾಗುತ್ತೋ ಗೊತ್ತಿಲ್ಲ ಎಂದರು.

ಸರ್ಕಾರ ಬೀಳಬಹುದು ಎಂಬ ಬಗ್ಗೆ ಕಾಂಗ್ರೆಸ್ನವರಿಗೆ ಭಯ ಇದೆ. ಅದಕ್ಕೆ ಅವರು ಬಿಜೆಪಿಗರು ಪಕ್ಷ ಬಿಡುತ್ತಾರೆ ಎಂದು ಹೇಳುತ್ತಿದ್ದಾರೆ. ಬಿಜೆಪಿಗರು ಹೋಗಿ ಅಲ್ಲಿ ಏನು ಮಾಡುವವರಿದ್ದಾರೆ? ಬಾಗಿಲು ಕಾಯಬೇಕು. ಅದು ಬಿಟ್ಟು ಮತ್ತೇನೂ ಸಾಧ್ಯವಿಲ್ಲ. ಮುಂದೆ ಈ ಸರ್ಕಾರ ಬಿದ್ದು ಹೋದರೆ, ಬಿಜೆಪಿ ಬಿಟ್ಟವರು ಏನು ಮಾಡುತ್ತಾರೆ? ಅದಕ್ಕೆ ಯಾರೂ ಬಿಜೆಪಿ ಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ