ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ

ಶುಕ್ರವಾರ, 24 ಫೆಬ್ರವರಿ 2023 (15:14 IST)
ಕಾರ್ಪೆಂಟರ್ ಕತ್ತು ಕೊಯ್ದು​ ಬರ್ಬರ ಹತ್ಯೆ ಮಾಡಲಾಗಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಬಳಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಕಾರ್ಪೆಂಟರ್​​​​​ ದಿನೇಶ್ ಹತ್ಯೆ ಮಾಡಲಾಗಿದೆ. ಜ್ಞಾನಭಾರತಿ ವ್ಯಾಪ್ತಿಯ ಮಂಗನಹಳ್ಳಿ ನಿವಾಸಿ ದಿನೇಶ್, ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಲಾಂಗ್​​ನಿಂದ ದಿನೇಶ್​​ ಕತ್ತು ಕೊಯ್ದು ಪರಾರಿಯಾಗಿದ್ದಾರೆ. ಬಳಿಕ ಪಕ್ಕದ ಖಾಲಿ ಜಾಗದಲ್ಲಿ ಲಾಂಗ್​ ಎಸೆದಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಫಿಂಗರ್ ಪ್ರಿಂಟ್ಸ್ ತಜ್ಞರು ಭೇಟಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ