ಚುನಾವಣೆ ಹೊಸ್ತಿಲಲ್ಲಿ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಧರ್ಮ ದಂಗಲ್

ಶುಕ್ರವಾರ, 24 ಫೆಬ್ರವರಿ 2023 (14:40 IST)
ಕೇವಲ ವ್ಯಾಪಾರ ವಹಿವಾಟು ಅಂತಿದ್ದ SP ರಸ್ತೆಗೆ ಕಾಲಿಟ್ಟ ಕಿಡಿಗೇಡಿಗಳು ಧರ್ಮದ  ಪಿತೂರಿ ನಡೆಸಿದ್ದಾರೆ.ಇಲ್ಲಿನ ಮುಸ್ಲಿಂ ವ್ಯಾಪಾರಿಗಳು ಜಿಹಾದಿಗಳೆಂದು SP ರೋಡ್ ನಲ್ಲಿ ಕೆಲವರಿಂದ ಕುಕೃತ್ಯ ನಡೆಯುತ್ತಿದೆ.ಹೀಗಾಗಿ SP ರೋಡ್ ವ್ಯಾಪಾರಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
 
 ಕಿಡಿಕೇಡಿಗಳ ಕೃತ್ಯದಿಂದ ಒಗ್ಗಟ್ಟಾಗಿ  ವ್ಯಾಪಾರಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದಾರೆ.ರಾಜ್ಯದ ಎಲೆಕ್ಟ್ರಾನಿಕ್ ವಸ್ತುಗಳ ಅತಿದೊಡ್ಡ ಮಾರುಕಟ್ಟೆ ಎಸ್ ಪಿ ರಸ್ತೆ.ಮುಸ್ಲಿಮರು ಇಲ್ಲಿ ವ್ಯಾಪಾರ ಮಾಡಿ ಅದರ ದುಡ್ಡಿಂದ ಜಿಹಾದಿಗಳು ಆಗ್ತಾರೆ ಅಂತ ಅಪಪ್ರಚಾರ ಮಾಡಿದ್ದಾರೆ.ಇದರಿಂದಾಗಿ ಎಸ್ ಪಿ ರಸ್ತೆ ವ್ಯಾಪಾರದಲ್ಲಿ ಬಿರುಗಾಳಿ ಉಂಟಾಗಿದೆ. ವ್ಯಾಪಾರ ಕುಗ್ಗಿದೆ ಅಂತ  ವ್ಯಾಪಾರಸ್ಥರು ಆಕ್ರೋಶ. ಹೊರಹಾಕಿದ್ದಾರೆ.
 
ಯೂಟ್ಯೂಬ್ ಚಾನೆಲ್ ಮೂಲಕ ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಇಲ್ಲದ ಸುದ್ದಿ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ.ಹೀಗಾಗಿ ವ್ಯಾಪಾರದಲ್ಲಿ ಧಾರ್ಮಿಕತೆ ತಂದ ವಿಚಾರವಾಗಿ ಎಸ್ ಪಿ ರಸ್ತೆ ವರ್ತಕರು ದೂರು ದಾಖಲಿಸಿದಾರೆ.ಕಿಡಿಗೇಡಿಗಳಿಂದ ವ್ಯಾಪಾರದಲ್ಲಿ ಧರ್ಮತರಲಾಗ್ತಿದೆ ಎಂದು  ಎಲ್ಲಾ ಧರ್ಮದ ವರ್ತಕರು ಪೊಲೀಸ್ ಠಾಣೆ ಮೆಟ್ಟೀಲೇರಿದರು.ಅನಗತ್ಯವಾಗಿ SP ರಸ್ತೆಯಲ್ಲಿ ವಿವಾದ ಸೃಷ್ಟಿಸಿ ಧರ್ಮ ಹೊಡೆಯುವ ಕೆಲಸ ಆಗ್ತಿದೆ.
 
ಈ ವೇಳೆ ಮಾತನಾಡಿದ ವರ್ತಕ ಶಿವಕುಮಾರ್ ನಾವಿಲ್ಲಿ ಎಲ್ಲಾ ಧರ್ಮದವರೂ ಅಣ್ಣ ತಮ್ಮಂದಿರಂತೆ ವ್ಯಾಪಾರ ಮಾಡ್ಕೊಂಡಿದ್ದೇವೆ.ಹಲವಾರು ವರ್ಷಗಳಿಂದ ನಾವಿಲ್ಲಿ ವ್ಯಾಪಾರ ಮಾಡ್ಕೊಂಡು ಬಂದಿದ್ದೇವೆ ನಮ್ಮ ಅನ್ನಕ್ಕೆ ಮಣ್ಣಾಕ ಬೇಡಿ ಅಂತ ಮುಸ್ಲಿಂ ವರ್ತಕರು ಮನವಿ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ