ನ‌ನ್ನ ಪರವಾಗಿ ನಿಂತ ಎಲ್ಲರಿಗೂ ಕೂಡ ಕೋಟಿ ವಂದನೆ ಡಿಸಿಎಂ ಡಿಕೆಶಿವಕುಮಾರ್

ಬುಧವಾರ, 29 ನವೆಂಬರ್ 2023 (21:01 IST)
ಕೋರ್ಟ್ ನಲ್ಲಿ ಏನಾಯ್ತು ಅಂತ ಗೊತ್ತಿಲ್ಲ.ನನ್ನ ವಕೀಲರು ತಿಳಿಸಿದ ಬಳಿಕ ಮಾತನಾಡಬೇಕು.ಯತ್ನಾಳ್ ಸೇರಿದಂತೆ ಯಾರು ಯಾರು ಅಭಿಪ್ರಾಯ ಏನು ಯಾರು ಯಾರು ಏನು ಮಾತನಾಡಿದ್ದಾರೆ ಎಲ್ಲ ನಮ್ರತೆಯಿಂದ ನೋಡ್ತಿದ್ದೇನೆ ನೋಡಿದ್ದೇನೆ.ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡ್ತೇನೆ.ನಾನೇನು ತಪ್ಪು ಮಾಡಿಲ್ಲ.

ನಾನು ಮಾಡಿದ್ದೆಲ್ಲ ಪಾರ್ಟಿ ಸಲುವಾಗಿ ಮಾಡಿದ ಕೆಲಸ.ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದು,ಸಾಕಷ್ಟು ಅನುಭವಿಸಿದ್ದೇನೆ.ಮುಂದೆಯೂ ಕೂಡ ತೊಂದರೆ ಕೊಡ್ತೀನಿ ಅಂದ್ರೆ ಅದನ್ನು ನೋಡಲು ಭಗವಂತ ಇದ್ದಾನೆ.ನನಗೆ ತೊಂದರೆ ಕೊಟ್ಟಿದ್ದಕ್ಕೆ ಏನಾಯ್ತು ಅಂತ ರಾಜ್ಯದ ಜನರೇ ನೋಡಿದ್ದಾರೆ.ನ‌ನ್ನ ಪರವಾಗಿ ನಿಂತ ಎಲ್ಲರಿಗೂ ಕೂಡ ಕೋಟಿ ವಂದನೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ