ಪ್ರಧಾನಿ ಮೋದಿಗೆ ಸುಳ್ಳು ಅಶ್ವಾಸನೆ ನೀಡುವುದೇ ಕಾಯಕ: ರಾಹುಲ್ ಗಾಂಧಿ

ಬುಧವಾರ, 29 ನವೆಂಬರ್ 2023 (12:43 IST)
ಪ್ರಧಾನಿ ಮೋದಿಯವರಿಗೆ ಆರೆಸ್ಸೆಸ್ ತರಬೇತಿ ನೀಡಿದೆ ಎನ್ನುವುದು ನನಗೆ ಗೊತ್ತಿದೆ.  ಆದರೆ, ಸುಳ್ಳು ಹೇಳುವುದನ್ನು ಬಿಟ್ಟು ಜನಪರ ಕಾರ್ಯಗಳಿಗೆ ಚಾಲನೆ ನೀಡಿ ಎನ್ನುವುದೇ ನನ್ನ ಮನವಿ ಎಂದು ಕಾಂಗ್ರೆಸ್ ಮುಖಂಡ  ರಾಹುಲ್ ಗಾಂಧಿ ಹೇಳಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ಭರವಸೆಯನ್ನು ಈಡೇರಿಸಿದ್ದಾರಾ? ಮೋದಿ ಸುಳ್ಳು ಹೇಳುವುದನ್ನು ಬಿಟ್ಟು ಜನತೆಗೆ ನೀಡಿದ ಭರವಸೆಗಳನ್ನು ಜಾರಿಗೆ ತರುವ ಕೆಲಸ ಆರಂಭಿಸಲಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
 
ಬಿಹಾರ್‌ನ ಮೋತಿಹಾರಿ ಜಿಲ್ಲೆಯ ಅರೇರಾಜ್ ಪಟ್ಟಣದಲ್ಲಿಮಾತನಾಡಿದ ರಾಹುಲ್, ಕಳೆದ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆಗಳು ಪೊಳ್ಳು ಎನ್ನುವುದು ಮತದಾರರಿಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದರು.   
 
ಬಿಹಾರ್ ಸಿಎಂ ನಿತೀಶ್ ಕುಮಾರ್, ಕಾಂಗ್ರೆಸ್, ಜೆಡಿಯು ಮತ್ತು ಆರ್‌ಜೆಡಿ ಒಂದಾಗಿ ಬಿಹಾರ್ ಇಮೇಜ್ ಬದಲಿಸಲಿವೆ. ಎಲ್ಲರೂ ಒಂದಾಗಿ ಬಿಜೆಪಿಯನ್ನು ಒಂದರ ನಂತರ ಮತ್ತೊಂದು ರಾಜ್ಯದಿಂದ ಓಡಿಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ