ಹಸಿವಿನಿಂದ ಮೂಕಪ್ರಾಣಿಯ ರೋಧನೆ ರೋದನೆ

ಗುರುವಾರ, 10 ನವೆಂಬರ್ 2022 (14:13 IST)
ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡಾನೆಗಳು ಆಹಾರ, ಆಸರೆ ಅರಸಿ ನಾಡಿಗೆ ಬರುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮನು ಎಂಬಾತ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೇ ಗ್ರಾಮದ ಲೋಕೇಶ್​​ ಎನ್ನುವವರ ಮನೆ ಮುಂದೆ ಮತ್ತೆ ಕಾಡಾನೆ ಕಾಣಿಸಿಕೊಂಡಿದೆ. ಆಹಾರ ಕೊಡಿ ಎನ್ನುವಂತೆ ಮನೆಯ ಮುಂದೆಯೇ ಆನೆ ಸಂಚಾರ ನಡೆಸಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಹಾರಕ್ಕಾಗಿ ಮನೆ ಹಿಂದೆ-ಮುಂದೆ ಓಡಾಟ ನಡೆಸಿದೆ. ಕಾಡಾನೆಗಳ ಭಯದಲ್ಲಿದ್ದ ಜನ ಆಹಾರ ನೀಡಲು ಹಿಂದೇಟು ಹಾಕಿದ್ದಾರೆ. ಕೆಲಹೊತ್ತು ಅಲ್ಲೆ ಅಡ್ಡಾಡಿದ ಆನೆ ನಂತರ ವಾಪಸ್​​​ ತೆರಳಿದೆ. ಆಹಾರಕ್ಕಾಗಿ ಆನೆ ಅಂಗಲಾಚುತ್ತಿರುವ ದೃಶ್ಯ ಕಂಡು ಅಯ್ಯೋ ಎನಿಸುತ್ತಿದೆ. ಕಾಡಿನೊಳಗೆ ಆಹಾರ ಸಿಗದೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ.  ಅರಣ್ಯಾಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ